ಅಭಿಷೇಕ್‌- ಅವಿವಾ ವಿವಾಹಕ್ಕೆ ಕ್ಷಣಗಣನೆ : ಮೆಹೆಂದಿ ಈವೆಂಟ್‌ನಲ್ಲಿ ತಾರೆಯರ ರಂಗು !

masthmagaa.com:

ಅವಿವಾ ಬಿದಪ್ಪ ಮತ್ತು ಅಭಿಷೇಕ್‌ ಅಂಬರೀಷ್‌ ಅವರ ಮದುವೆ ತಯಾರಿ ಜೋರಾಗಿ ನಡೀತಿದೆ. ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಜೋಡಿ ಇಂದು ಮೆಹೆಂದಿ ಶಾಸ್ತ್ರದಲ್ಲಿ ಮಿಂಚ್ತಾ ಇದಾರೆ. ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಜೂನ್‌ 5ಕ್ಕೆ ಹಸೆಮಣೆ ಏರಲಿದ್ದಾರೆ. ಮದುವೆಗೂ ಮುಂಚೆ ನಡೆಯುವ ಎಲ್ಲಾ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೀತಾ ಇದೆ.

ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಅವಿವಾ ಫೊಟೋಗೆ ಪೋಸ್‌ ಕೊಟ್ಟಿದ್ದಾರೆ. ಇನ್ನೊಂದು ಕಡೆ ಅಭಿಷೇಕ ಅಂಬರೀಷ್‌ ಅವರ ಮೆನೆಯಲ್ಲೂ ಕೂಡ ಮೆಹಂದಿ ಕಾರ್ಯಕ್ರಮ ಜೋರಾಗೆ ನಡೀತಾ ಇದೆ. ಅಭಿಷೇಕ್ ಅಂಬರೀಷ್ ಅವರು ಕೈ ಮೇಲೆ ಅವಿವಾ, ಸುಮಲತಾ, ರೆಬೆಲ್ ಹಾಗೂ ಮಂಡ್ಯ ಅಂತ ಬರೆದುಕೊಂಡಿದ್ದಾರೆ. ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ ಮೊದಲಾದ ಸೆಲೆಬ್ರಿಟಿಗಳು ಸುಮಲತಾ ಜೊತೆ ನಿಂತು ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

-masthmagaa.com

Contact Us for Advertisement

Leave a Reply