ಅಮೆರಿಕದಲ್ಲೀಗ ಡೆಲ್ಟಾ ಹಾವಳಿ! ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

masthmagaa.com:

ಅಮೆರಿಕದಲ್ಲಿ ಕಮ್ಮಿಯಾಗಿದ್ದ ಕೊರೋನಾ ಕೇಸಸ್​​ ನಿಧಾನವಾಗಿ ಮೇಲಕ್ಕೇಳ್ತಿರೋ ಹಾಗೆ ಕಾಣ್ತಿದೆ. ಇದಕ್ಕೆ ಕಾರಣ ವೇಗವಾಗಿ ಹರಡೋ ಡೆಲ್ಟಾ ರೂಪಾಂತರಿ. ಅಮೆರಿಕದಲ್ಲಿ ಇದುವರೆಗೆ ಜಿನೋಮ್​ ಸೀಕ್ವೆನ್ಸಿಂಗ್​ಗೆ ಒಳಪಡಿಸಿದ ಒಟ್ಟು ಕೊರೋನಾ ಕೇಸ್​​ಗಳಲ್ಲಿ 83 ಪರ್ಸೆಂಟ್​ ಡೆಲ್ಟಾ ರೂಪಾಂತರಿಯೇ ಆಗಿದೆ ಅಂತ ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್​ ಪ್ರಿವೆನ್ಷನ್​ ಹೇಳಿದೆ. ಅಮೆರಿಕ ಮಾತ್ರವಲ್ಲ ನಮ್ಮ ಪಕ್ಕದ ಪಾಕಿಸ್ತಾನ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಡೆಲ್ಟಾ ರೂಪಾಂತರಿಯ ಹಾವಳಿ ಶುರುವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಇಡೀ ವಿಶ್ವದಲ್ಲಿ ಡೆಲ್ಟಾ ರೂಪಾಂತರಿ ಡಾಮಿನೆಂಟ್ ಆಗಲಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಭಾರತದಲ್ಲಿ ಕೊರೋನಾದ ಎರಡನೇ ಅಲೆಗೆ ಇದೇ ರೂಪಾಂತರಿ ಕಾರಣವಾಗಿತ್ತು.

-masthmagaa.com

Contact Us for Advertisement

Leave a Reply