100ಕ್ಕೂ ಹೆಚ್ಚು ದೇಶಗಳಿಗೆ ಹರಡಿದ ಕೊರೋನಾ ಮಹಾಮಾರಿ..!

masthmagaa.com:

ಜಾಗತಿಕವಾಗಿ 1 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡು 3,600ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಡೆಡ್ಲಿ ಕೊರೋನಾ ವೈರಸ್ 100ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ ಅನ್ನೋ ಆಘಾತಕಾರಿ ವಿಷಯವನ್ನ ವಿಶ್ವ ಆರೋಗ್ಯ ಸಂಸ್ಥೆ (WHO) ಬಹಿರಂಗಪಡಿಸಿದೆ. ಭಾನುವಾರ ಬಲ್ಗೇರಿಯಾ ಹಾಗೂ ಮೋಲ್ಡೋವಾ ದೇಶಗಳಲ್ಲಿ ಮೊದಲ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಅರ್ಜೆಂಟೀನಾದಲ್ಲಿ ಕೊರೋನಾಗೆ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.

ಇರಾನ್​ನಲ್ಲಿ ಭಾನುವಾರ ಒಂದೇ ದಿನ 49 ಜನ ಬಲಿಯಾಗಿದ್ದು, ದೇಶದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 194ಕ್ಕೆ ಏರಿಕೆಯಾಗಿದೆ. ಹೊಸದಾಗಿ 743 ಪ್ರಕರಣಗಳು ಬೆಳಕಿಗೆ ಬಂದಿದ್ದು ಕೊರೋನಾ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ 6,500ರ ಗಡಿ ದಾಟಿದೆ.

ಇಟಲಿಯಲ್ಲಿ 200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 14 ಪ್ರಾಂತ್ಯಗಳನ್ನು ಲಾಕ್​ಡಾನ್​ ಮಾಡಲಾಗಿದೆ. ಚೀನಾವನ್ನು ಬಿಟ್ಟು ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿರುವುದು ದಕ್ಷಿಣ ಕೊರಿಯಾದಲ್ಲಿ. ಅಲ್ಲಿ 7 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ವೈರಸ್ ತಗುಲಿದೆ.

-masthmagaa.com

ಇನ್ನು ಕೊರೋನಾ ವೈರಸ್​ ಬಗ್ಗೆ 12 ವರ್ಷಗಳ ಹಿಂದೆಯೇ ಪುಸ್ತಕವೊಂದು ಭವಿಷ್ಯವಾಣಿ ನುಡಿದಿತ್ತಾ ಅನ್ನೋ ಬಗ್ಗೆ masthmagaa.comನ ವಿಡಿಯೋ ನೋಡಲು ಕೆಳಗಿನ ಲಿಂಕ್​ ಓಪನ್ ಮಾಡಿ

https://youtu.be/MqGprS16Itw

Contact Us for Advertisement

Leave a Reply