ಇಸ್ರೋದಿಂದೆ ಮೂರು ರೀತಿಯ ವೆಂಟಿಲೇಟರ್ ನಿರ್ಮಾಣ!

masthmagaa.com:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮೂರು ರೀತಿಯ ವೆಂಟಿಲೇಟರ್​​ಗಳನ್ನು ಅಭಿವೃದ್ಧಿಪಡಿಸಿದೆ. ಇದೀಗ ಅದನ್ನು ಕ್ಲಿನಿಕಲ್ ಉಪಯೋಗಕ್ಕೆ ನೀಡಲು ಮುಂದಾಗಿದ್ದು, ವೆಂಟಿಲೇಟರ್ ಉತ್ಪಾದಿಸೋ ಸಂಸ್ಥೆಗಳಿಗೆ ತಂತ್ರಜ್ಞಾನ ಹಸ್ತಾಂತರಿಸೋದಾಗಿ ಘೋಷಿಸಿದೆ. ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ವೆಂಟಿಲೇಟರ್​ಗಳು ಇವಾಗಿದ್ದು, ಪೋರ್ಟೇಬಲ್ ಆಗಿದೆ. ಅಂದ್ರೆ ಎಲ್ಲಿಗೆ ಬೇಕಾದ್ರೂ ಸುಲಭವಾಗಿ ಸಾಗಿಸಬಹುದಾಗಿದೆ. ಇವುಗಳಿಗೆ ಪ್ರಾಣ, ವಾಯು, ಸ್ವಸ್ಥ ಅಂತ ಹೆಸರಿಡಲಾಗಿದೆ. ಅಂದ್ರೆ Programmable Respiratory Assistance for the Needy Aid, ವಾಯು ಅಂದ್ರೆ Ventilation assist Unit ಮತ್ತು ಸ್ವಸ್ಥ ಅಂದ್ರೆ Space Ventilator Aided System for Trauma Assistance ಅಂತ ಹೆಸರಿಡಲಾಗಿದೆ. ಅಷ್ಟೇ ಅಲ್ಲ.. ಕಡಿಮೆ ವೆಚ್ಚದಲ್ಲಿ ತಯಾರಿಸಲಾಗೋ ಆಕ್ಸಿಜನ್ ಕಾನ್ಸನ್​ಟ್ರೇಟರ್​ನ್ನು ಕೂಡ ಇಸ್ರೋ ಸಿದ್ಧಪಡಿಸಿದೆ.

-masthmagaa.com

Contact Us for Advertisement

Leave a Reply