ಕಾಕ್ಟೇಲ್ ವ್ಯಾಕ್ಸಿನ್ನೇ ಬೆಸ್ಟು! ಅಧ್ಯಯನದಲ್ಲಿ ಹೊಸ ಮಾಹಿತಿ

masthmagaa.com:

ಕೊರೋನಾ ಲಸಿಕೆಗಳನ್ನು ಮಿಕ್ಸ್ ಮಾಡಿದ್ರೆ ಏನಾಗುತ್ತೆ ಅನ್ನೋ ಬಗ್ಗೆ ಅಧ್ಯಯನಗಳು ನಡೀತಾನೇ ಇವೆ. ಈಗ ಆಕ್ಸ್​ಫರ್ಡ್​​ ಯುನಿವರ್ಸಿಟಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಈ ರೀತಿ ಮಿಕ್ಸಿಂಗ್ ಡೋಸ್ ನೀಡಿದ್ರೆ ಕೊರೋನಾ ವಿರುದ್ಧ ಹೆಚ್ಚು ಪರಿಣಾಮಕಾರಿ ಅಂತ ಗೊತ್ತಾಗಿದೆ. ಈ ಅಧ್ಯಯನದಲ್ಲಿ ಮೊದಲು ಫೈಜರ್ ಲಸಿಕೆ ನೀಡಿ 4 ವಾರ ಕಳೆದ ಬಳಿಕ ಅಸ್ಟ್ರಜನೆಕಾ ಲಸಿಕೆ ನೀಡಲಾಗಿತ್ತು. ಅವರಲ್ಲಿ ಕೊರೋನಾ ವಿರುದ್ಧದ ಪ್ರತೀಕಾಯಗಳು ಮಾಮೂಲಿಗಿಂತ ಹೆಚ್ಚು ವೃದ್ಧಿಯಾಗಿವೆ ಅಂತ ಲ್ಯಾನ್ಸೆಟ್ ಜರ್ನಲ್​​ನಲ್ಲಿ ವರದಿ ಪ್ರಕಟಿಸಲಾಗಿದೆ. ಅಂದಹಾಗೆ ಲಸಿಕೆ ಮಿಕ್ಸ್ ಆದ್ರೆ, ಎರಡು ಡೋಸ್​ಗಳ ನಡುವಿನ ಅಂತರವನ್ನು ಹೆಚ್ಚಿಸಿದ್ರೆ ಏನಾದ್ರು ತೊಂದ್ರೆಯಾಗುತ್ತಾ ಅಂತ ತಜ್ಞರು ಪ್ರಯೋಗಗಳನ್ನು ನಡೆಸುತ್ತಲೇ ಇದಾರೆ. ಯಾಕಂದ್ರೆ 2 ಡೋಸ್​ಗಳ ನಡುವಿನ ಅಂತರವನ್ನು ಹೆಚ್ಚು ಮಾಡಿದ್ರೆ, ಮತ್ತಷ್ಟು ಜನರಿಗೆ ಮೊದಲ ಡೋಸ್​​ ಲಸಿಕೆ ಹಾಕಲು ಸಾಧ್ಯವಾಗುತ್ತೆ. ಅದೇ ರೀತಿ ಲಸಿಕೆ ಮಿಕ್ಸ್ ಆದ್ರೂ ಪರವಾಗಿಲ್ಲ ಅಂತಾದ್ರೆ ಒಂದು ಸಂಸ್ಥೆಯ ಲಸಿಕೆ ಸ್ಟಾಕ್ ಖಾಲಿಯಾಗಿದ್ರೆ, 2ನೇ ಡೋಸ್ ನೀಡುವಾಗ ಬೇರೆ ಲಸಿಕೆ​ ಕೊಡೋಕೆ ಸಾಧ್ಯವಾಗುತ್ತೆ. ಇಲ್ಲವಾದ್ರೆ ಮೊದಲ ಡೋಸ್ ಹಾಕಿಸಿಕೊಂಡೋರು ಅದೇ ಕಂಪನಿಯ ಲಸಿಕೆ ಸ್ಟಾಕ್ ಬರುವರೆಗೂ ಕಾಯಬೇಕಾಗುತ್ತೆ. ಇನ್ನು ಮತ್ತೊಂದು ಅಧ್ಯಯನದಲ್ಲಿ ಕೊರೋನಾ ಲಸಿಕೆಗಳ ಪೈಕಿ ಎಂಆರ್​ಎನ್​ಎ ಲಸಿಕೆಗಳಾದ ಫೈಜರ್ ಮತ್ತು ಮಾಡೆರ್ನಾ ಹೆಚ್ಚು ಪರಿಣಾಮಕಾರಿ.. ಹಲವು ವರ್ಷಗಳ ಕಾಲ ಅಥವಾ ಜೀವನದುದ್ದಕ್ಕೂ ಕೊರೋನಾದಿಂದ ರಕ್ಷಣೆ ನೀಡುತ್ತೆ. ಬೂಸ್ಟರ್ ಅಂತ ಹೆಚ್ಚುವರಿಯಾಗಿ ಮತ್ತೊಂದು ಡೋಸ್ ಲಸಿಕೆ ಹಾಕಿಸಿಕೊಳ್ಳುವ ಅವಶ್ಯಕತೆ ಇಲ್ಲ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply