ಬ್ರಿಟಿಷರ ವಿರುದ್ಧ ಗೆದ್ದ ಮೋದಿ ಸರ್ಕಾರ! ಹೇಗೆ ಗೊತ್ತಾ..?

masthmagaa.com:

ಭಾರತದ ತಿರುಗುಬಾಣಕ್ಕೆ ಬ್ರಿಟಿಷರು ಕೊನೆಗೂ ಬಗ್ಗಿದ್ದಾರೆ. ಕೋವಿಶೀಲ್ಡ್​​ನ 2 ಡೋಸ್ ಅಥವಾ ಯುನೈಟೆಡ್ ಕಿಂಗ್​​ಡಮ್​​​​ನಲ್ಲಿ ಅಪ್ರೂವ್ ಆಗಿರೋ ಯಾವುದಾದ್ರೂ ಲಸಿಕೆ ಹಾಕಿಕೊಂಡಿರೋ ಭಾರತೀಯರಿಗೆ ಕ್ವಾರಂಟೈನ್ ಕಡ್ಡಾಯವಲ್ಲ ಅಂತ ಹೇಳಿದೆ. ಅಕ್ಟೋಬರ್ 11ರಿಂದ ಯುನೈಟೆಡ್ ಕಿಂಗ್​ಡಮ್​ಗೆ ಹೋಗೋರಿಗೆ ಈ ರೂಲ್ಸ್ ಅನ್ವಯವಾಗಲಿದೆ. ಕಳೆದೊಂದು ತಿಂಗಳಿಂದ ಸಹಕರಿಸಿದ ಭಾರತಕ್ಕೆ ಧನ್ಯವಾದ ಅಂತ ಭಾರತದಲ್ಲಿರೋ ಬ್ರಿಟಿಷ್ ಹೈಕಮಿಷನರ್ ತಿಳಿಸಿದ್ದಾರೆ. ಅಂದಹಾಗೆ ಯುನೈಟೆಡ್ ಕಿಂಗ್​​ಡಮ್,​ ಭಾರತ ಸೇರಿದಂತೆ ಕೆಲ ದೇಶಗಳಿಂದ ಪ್ರಜೆಗಳು ಅಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿರೋ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿದ್ರೂ ಕ್ವಾರಂಟೈನ್​​ಗೆ ಒಳಗಾಗಬೇಕು ಅಂತ ರೂಲ್ಸ್ ಮಾಡಿತ್ತು. ಅದಕ್ಕೆ ಗುನ್ನ ಕೊಟ್ಟಿದ್ದ ಭಾರತ ಅಕ್ಟೋಬರ್ 1ರಂದು ಯುನೈಟೆಡ್ ಕಿಂಗ್​ಡಮ್​ನಿಂದ ಬರೋ ಪ್ರಜೆಗಳು ಕೂಡ ಭಾರತದಲ್ಲಿ 10 ದಿನ ಕ್ವಾರಂಟೈನ್​​ಗೆ ಒಳಗಾಗಬೇಕು ಅಂತ ಹೇಳಿತ್ತು. ಈಗ ಬ್ರಿಟಿಷರು ದಾರಿಗೆ ಬಂದಿದ್ದಾರೆ. ಕ್ವಾರಂಟೈನ್ ರೂಲ್ಸ್ ತೆಗೆದು ಹಾಕಿದ್ದಾರೆ.

ಇದ್ರ ಬೆನ್ನಲ್ಲೇ ಭಾರತದ ಆರೋಗ್ಯ ಇಲಾಖೆ ಯುನೈಟೆಡ್ ಕಿಂಗ್​ಡಮ್​ನಿಂದ ಬರೋ ಪ್ರಯಾಣಿಕರ ಸಂಬಂಧ ಹೊಸ ಗೈಡ್​ಲೈನ್ಸ್​ ಬಿಡುಗಡೆ ಮಾಡೋದಾಗಿ ಹೇಳಿದೆ. ಮತ್ತೊಂದ್ಕಡೆ ವಿದೇಶಾಂಗ ಸಚಿವ ಎಸ್​ ಜೈಶಂಕರ್ ಯುನೈಟೆಡ್ ಕಿಂಗ್​ಡಮ್​ನ ವಿದೇಶಾಂಗ ಸಚಿವ ಲಿಜ್ ಟ್ರುವಾಸ್​​ ಜೊತೆ ಮೀಟಿಂಗ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply