ಕೋವಿಡ್‌ ರೋಗಿಯನ್ನ ಸ್ಥಳಾಂತರ ಮಾಡೋಕೆ ಕ್ರೇನ್‌ ಬಳಸಿದ ಚೀನಾ!

masthmagaa.com:

ಚೀನಾದಲ್ಲಿ ಕೋವಿಡ್‌ ಹೆಚ್ಚಾಗ್ತಿದ್ದಂತೆ ರೋಗ ಹರಡದಂತೆ ಚೀನಾ ತೆಗೆದುಕೊಳ್ತಿರೊ ವಿಚಿತ್ರ ಹಾಗೂ ಅಮಾನವೀಯ ಕ್ರಮಗಳು ಜಾಸ್ತಿಯಾಗ್ತಾನೇ ಇದೆ. ಇದೀಗ ಕೋವಿಡ್‌ ಪಾಸಿಟಿವ್‌ ವ್ಯಕ್ತಿಯೊಬ್ಬರನ್ನ ಒಂದು ಕಡೆಯಿಂದ ಇನ್ನೊಂದ್‌ ಕಡೆಗೆ ಶಿಫ್ಟ್‌ ಮಾಡೋಕೆ ಚೀನಾ ಕ್ರೇನ್‌ ಬಳಸಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ. ಸತತ ಮೂರು ದಿನಗಳಿಂದ ಚೀನಾದಲ್ಲಿ ಸಾವಿರಕ್ಕೂ ಅಧಿಕ ಕೊರೊನಾ ಕೇಸ್‌ಗಳು ವರದಿಯಾಗಿವೆ. ಇದರ ಬೆನ್ನಲ್ಲೇ ಚೀನಾದ ಕಠಿಣ ಕೋವಿಡ್‌ ಕ್ರಮಗಳು ಹೆಚ್ಚಾಗಿವೆ. ದೇಶದ ಹಲವು ನಗರಗಳಲ್ಲಿ ಲಾಕ್‌ಡೌನ್‌ ಮತ್ತೆ ಜಾರಿಯಾಗಿದೆ. ಇದೀಗ ಕೊರೊನಾ ಪೀಡಿತರನ್ನ ಸ್ಥಳಾಂತರ ಮಾಡೋಕೆ ಕ್ರೇನ್‌ ಬಳಸಲಾಗಿದೆ ಅಂತ ಹೇಳಲಾಗ್ತಿದೆ. ಆದ್ರೆ ಚೀನಾ ಸರ್ಕಾರ ಮಾತ್ರ ನಿಜವಾಗಿಯೂ ಈ ರೀತಿ ಮಾಡಿರೋದು ಯಾಕೆ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply