ಕೋವಿಡ್‌ನ ಹೊಸ ರೂಪಾಂತರಿ XBB 1.16ನ 349 ಕೇಸ್‌ಗಳು ದೃಢ! ರಾಜ್ಯದಲ್ಲಿ 61 ಕೇಸ್‌ಗಳು!

masthmagaa.com:

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಅದ್ರಲ್ಲೂ ಹೊಸ ರೂಪಾಂತರಿ (XBB1.16) ನ 349 ಪ್ರಕರಣಗಳು ದೃಢಪಟ್ಟಿವೆ ಅಂತ ಕೇಂದ್ರ ಸರ್ಕಾರ ಹೇಳಿದೆ. 9 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌-19ರ (XBB1.16) ನ ಪ್ರಕರಣಗಳು ಪತ್ತೆಯಾಗಿವೆ. ಇದ್ರಲ್ಲಿ ಮಹಾರಾಷ್ಟ್ರದಲ್ಲಿ ಗರಿಷ್ಠ 105, ತೆಲಂಗಾಣದಲ್ಲಿ 93 ಹಾಗೂ ಕರ್ನಾಟಕದಲ್ಲಿ 61 ಪ್ರಕರಣಗಳು ದಾಖಲಾಗಿವೆ. ಇನ್ನು ಇತ್ತ ಇಂದು ದೇಶದಲ್ಲಿ ಹೊಸದಾಗಿ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ.

-masthmagaa.com

Contact Us for Advertisement

Leave a Reply