ಕೋವಿನ್ ವೆಬ್​ಸೈಟ್​​ನಲ್ಲಿ ರಿಜಿಸ್ಟ್ರೇಷನ್​​ಗೆ ಫುಲ್ ರಷ್!!

masthmagaa.com:

ಮೇ 1ರಿಂದ 3ನೇ ಹಂತದ ಲಸಿಕೆ ಅಭಿಯಾನ ನಡೆಯಲಿದ್ದು, 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನಿಡಲಾಗಿದೆ. ಆದ್ರೆ 18ರಿಂದ 45 ವರ್ಷ ವಯಸ್ಸಿನವರು ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ವೆಬ್​ಸೈಟ್ ಅಥವಾ ಆರೋಗ್ಯ ಸೇತು ಆ್ಯಪ್​ ಮೂಲಕ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು. ಇಂದು ಸಂಜೆ 4 ಗಂಟೆಯಿಂದಲೇ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದ್ರೆ ಕೆಲವರಿಗೆ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗ್ತಿಲ್ಲ. ಇದ್ರಿಂದ ಸಿಟ್ಟಿಗೆದ್ದಿರೋ ನಮ್ಮ ಯುವ ಪೀಳಿಗೆ ಸರ್ವರ್ ಡೌನ್ ಆಗಿದೆ.. ಮತ್ತೆ ಐಟಿ ಸೂಪರ್ ಪವರ್ ದೇಶ ಅಂತ ಹೇಳ್ಕೊಳ್ತಾರೆ. ಸರಿಯಾದ ವ್ಯವಸ್ಥೆ ಮಾಡಿಕೊಂಡಿಲ್ಲ ಅಂತ ಸಿಟ್ಟಾಗಿದ್ದಾರೆ. ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಮೊದಲ ನಿಮಿಷದಲ್ಲೇ 27 ಲಕ್ಷ ಮಂದಿ ರಿಜಿಸ್ಟರ್ ಆಗಿದ್ಧಾರೆ. ರಾಜ್ಯ ಮತ್ತು ಲಸಿಕೆ ಕೇಂದ್ರಗಳಲ್ಲಿರೋ ಸ್ಲಾಟ್​​​ಗಳ ಆಧಾರದ ಮೇಲೆ ಅಪಾಯಿಂಟ್​​ಮೆಂಟ್ ನೀಡಲಾಗುತ್ತೆ. ಈಗ ಅಪಾಯಿಂಟ್​ಮೆಂಟ್ ಆಗದೇ ಇದ್ರೆ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಚೆಕ್ ಮಾಡಿ.. ತಾಳ್ಮೆಯಿಂದ ಇರಿ..ಅರ್ಥ ಮಾಡಿಕೊಳ್ಳಿ ಅಂತ ಸರ್ಕಾರ ಮನವಿ ಮಾಡಿದೆ. ಫ್ರೆಂಡ್ಸ್​, ನಮ್ಮದು ಯುವದೇಶ.. ನಮ್ಮಲ್ಲಿ ಈ ಏಜ್​ ಗ್ರೂಪ್​​ನ ಜನ ತುಂಬಾ ಇದಾರೆ..

ಭಾರತದ ಒಟ್ಟು ಜನಸಂಖ್ಯೆಯಲ್ಲಿ 17 ವರ್ಷದ ಒಳಗಿನವರು 34.4 ಕೋಟಿ ಇದ್ರೆ, 18-44 ವರ್ಷ ವಯಸ್ಸಿನವರು 62.2 ಕೋಟಿ ಜನ ಇದ್ದಾರೆ. ಈ ಏಜ್​ಗ್ರೂಪ್​​ನ ಜನ ಇಂಟರ್​ನೆಟ್ ಯುಗದವರೇ ಆಗಿದ್ದು, ಇವರಲ್ಲಿ ಹೆಚ್ಚಿನ ಜನ ರಿಜಿಸ್ಟರ್ ಮಾಡಿಕೊಳ್ಳಲು ಯತ್ನಿಸಿರ್ತಾರೆ. ಒಂದು ವೆಬ್​ಸೈಟ್​​​ಗೆ ಒಂದೇ ಸಮನೆ ಇಷ್ಟೊಂದು ಜನ ಎಂಟರ್ ಆದ್ರೆ ಹ್ಯಾಂಗ್ ಆಗದೇ ಇರುತ್ತಾ..? ಸ್ವಲ್ಪ ನೀವೇ ಯೋಚನೆ ಮಾಡಿ.. ಇನ್ನು ದೇಶದಲ್ಲಿ 45ರಿಂದ 59 ವರ್ಷ ವಯಸ್ಸಿನವರು 32.1 ಕೋಟಿ ಜನ ಇದ್ದಾರೆ. 60 ವರ್ಷ ದಾಟಿದವರು 12.5 ಕೋಟಿ ಜನ ಇದ್ದಾರೆ.

ಇನ್ನೊಂದು ವಿಚಾರ ಅಂದ್ರೆ ಲಸಿಕೆ ಹಾಕಿಸಿಕೊಳ್ಳೋಕೆ ಹೇಳಿದ್ಧಾರೆ. ಹೋಟೆಲ್​ನಲ್ಲಿ ಪಾರ್ಸೆಲ್​​ಗೆ ಅವಕಾಶ ಇದೆ. ಆದ್ರೆ ಮನೆಯಿಂದ ಹೊರಗೆ ಹೋಗೋಕಿಲ್ಲ.. ಮತ್ತೆ ಹೋಟೆಲ್​​ಗೆ ಹೋಗೋದು ಹೇಗೆ ಅಂತ ನಿನ್ನೆ ಹಲವರು ಕಾಮೆಂಟ್ ಮಾಡಿದ್ರು. ಸ್ನೇಹಿತರೇ ನೀವೆಲ್ಲಾ ಈಗಾಗಲೇ ನೋಡಿರುವಂತೆ, ಕೇಳಿರುವಂತೆ ಇದು ಜನತಾ ಲಾಕ್​ಡೌನ್​​. ನಿಮಗೆ ಅಗತ್ಯ ಕಾರಣ ಇದ್ರೆ ಹೊರಗೆ ಹೋಗಲು ಅವಕಾಶ ಇದೆ.. ಹಾಗಂತ ಸುಳ್ ಸುಳ್ ಹೇಳಿ ತಗಲಾಕ್ಕೊಂಡ್ರೆ ಬೀಳುತ್ತೆ.. ಊಟ ತರೋಕೆ ಹೋದ್ರೆ, ಲಸಿಕೆ ಹಾಕಿಸಿಕೊಳ್ಳಲು ಹೋದ್ರೆ ಏನೂ ಹೇಳಲ್ಲ.. ಅವಕಾಶ ಇದೆ.

-masthmagaa.com

Contact Us for Advertisement

Leave a Reply