ಕಾಗೆ ಕೂಗಿದ್ರೆ ನೆಂಟರು ಬರ್ತಾರೆ ಅನ್ನೋದು ಯಾಕೆ ಗೊತ್ತಾ..?

ಕಾಗೆ ಕೂಗಿದ ಕೂಡ್ಲೆ ಮನೆಗೆ ನೆಂಟ್ರು ಬರ್ತಾರಾ..? ಪುರಾತನ ಕಾಲದಿಂದಲೂ ನಡೆದು ಬಂದ ಸಂಪ್ರದಾಯದಲ್ಲಿ ಏನಾದ್ರೂ ಸತ್ಯ ಇದಿಯಾ..? ಈ ಸಂಪ್ರದಾಯ ಹೇಗೆ ಶುರುವಾಯ್ತು..? ಅಂತ ಹೇಳ್ತೀವಿ ನೋಡಿ..

ಸ್ನೇಹಿತರೇ, ಸಿಟಿಯಲ್ಲಿ ಕಾಗೆಗಳು ಕೂಗಿದ್ರೆ ಅದು ಕಾಮನ್. ಯಾರೂ ತಲೆ ಕೆಡಿಸಿಕೊಳ್ಳೋಕೆ ಹೋಗಲ್ಲ. ಯಾಕಂದ್ರೆ ಇಲ್ಲಿ ಕಾಗೆ ಯಾರ ಮನೆ ಮೇಲ್ ಕೂತು ಕೂಗ್ತಿದೆ ಅಂತಾನೇ ಗೊತ್ತಾಗಲ್ಲ. ಆದ್ರೆ ಹಳ್ಳಿಗಳಲ್ಲಿ ಹೀಗಲ್ಲ. ಅಲ್ಲಿ ಮನೆ ಮೇಲೆ ಅಥವಾ ಸುತ್ತಮುತ್ತ ಕಾಗೆ ಬಂದು ಕುಳಿತು ಕೂಗಾಡಿದ್ರೆ ನೆಂಟ್ರು ಬರ್ತಾರೆ ಅಂತಾ ಹೇಳ್ತಾರೆ. ಅದೂ ಸುಮ್ನೆ ಅಲ್ಲ. ಅದ್ರ ಹಿಂದೆಯೂ ಒಂದು ಬಲವಾದ ಕಾರಣ ಇದೆ.

ಸಂದೇಶ ತರುತ್ತಿದ್ದವು ಪಕ್ಷಿಗಳು..!
ಹಿಂದೆ ಫೋನು, ಪೋಸ್ಟಾಫೀಸು ಯಾವ್ದೂ ಇರಲಿಲ್ಲ. ಹೀಗಾಗಿ ಪಕ್ಷಿಗಳ ಮೂಲಕ ಸಂದೇಶ ಕಳಿಸಲಾಗ್ತಿತ್ತು. ಒಂದು ಊರಿನ ಪಕ್ಷಗಳು ಮತ್ತೊಂದು ಊರಿಗೆ ಸಂದೇಶ ಹೊತ್ತು ಹೋಗ್ತಿದ್ವು. ಆದ್ರೆ ಕಾಗೆಗಳಿಗೆ ಒಂದ್ ವಿಚಿತ್ರ ಸ್ವಭಾವ ಇದೆ. ತಮ್ಮ ಜಾಗಕ್ಕೆ ಬೇರೆ ಪಕ್ಷಿಗಳು ಬಂದ್ರೆ ಗಂಟ್ಲು ಹರಿದು ಹೋಗೋಹಾಗೆ ಕೂಗೋ ಅಭ್ಯಾಸವಿದೆ. ಸೋ ಈ ರೀತಿ, ಆ ಬೇರೆ ಊರಿನ ಪಕ್ಷಿಗಳು ಸಂದೇಶ ಹೊತ್ತು ಬಂದಾಗಲೂ ಕಾಗೆಗಳು ಕೂಗುತ್ತಿದ್ವು. ಜನ ಇದರಿಂದ, ಯಾವುದೋ ಸಂದೇಶ ಬಂದಿದೆ ಅಂತಾ ಗೆಸ್ ಮಾಡ್ತಿದ್ರು. ಅದೇ ಮುಂದುವರಿದು ಕಾಗೆ ಕೂಗಿದ್ರೆ ಯಾರೋ ನೆಂಟರು ಬರ್ತಾರೆ ಅನ್ನೋ ಸಂಪ್ರದಾಯ ಬಂತು.

Contact Us for Advertisement

Leave a Reply