ʻಮೋಚಾʼ ಚಂಡಮಾರುತ ಸಂತ್ರಸ್ತ ಮಯನ್ಮಾರ್‌ಗೆ ʻಆಪರೇಷನ್‌ ಕರುಣಾʼ ಮೂಲಕ ಸಹಾಯ ಹಸ್ತ ಚಾಚಿದ ಭಾರತ!

masthmagaa.com:

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ʻಮೋಚಾʼ ಚಂಡಮಾರುತದ ಹೊಡೆತದಿಂದ ತತ್ತರಿಸಿ ಹೋಗಿರುವ ಮಯನ್ಮಾರ್‌ಗೆ ಭಾರತ ಸಹಾಯ ಹಸ್ತ ಚಾಚಿದೆ. ಮಯನ್ಮಾರ್‌ ಜನತೆಗೆ ನೆರವು ನೀಡಲು ಭಾರತ ಸರ್ಕಾರ ʻಆಪರೇಷನ್‌ ಕರುಣಾʼ ಅನ್ನೊ ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಭಾರತೀಯ ನೌಕಾಪಡೆಯ ಮೂರು ಹಡಗುಗಳು ಇಂದು ಆಪರೇಷನ್‌ ಕರುಣಾ ಅಡಿಯಲ್ಲಿ ಯಾಂಗೋನ್ ತಲುಪಿದ್ದು, ನಾಲ್ಕನೇ ಹಡಗು ನಾಳೆ ತಲುಪಲಿದೆ ಅಂತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಈ ಹಡಗುಗಳಲ್ಲಿ ತುರ್ತು ಆಹಾರ ಪದಾರ್ಥಗಳು, ಟೆಂಟ್‌ಗಳು, ಅಗತ್ಯ ಔಷಧಗಳು, ನೀರಿನ ಪಂಪ್‌ಗಳು, ಪೋರ್ಟಬಲ್ ಜನರೇಟರ್‌ಗಳು, ಬಟ್ಟೆ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನ ಕಳಿಸಲಾಗಿದೆ. ಈ ಮೂಲಕ ಮಯನ್ಮಾರ್‌ನ ಸಂಕಷ್ಟ ಪರಿಸ್ಥಿತಿಗೆ ಸ್ಪಂದಿಸಿರುವ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ ಅಂತ ಜೈಶಂಕರ್‌ ತಿಳಿಸಿದ್ದಾರೆ. ಅಂದ್ಹಾಗೆ ಮೋಚಾ ಚಂಡಮಾರುತದಿಂದ ಮಯನ್ಮಾರ್‌ನಲ್ಲಿ ನೂರಾರು ಮನೆಗಳು ಭೂಮಿಗೆ ಉರುಳಿದ್ದು, ಇಲ್ಲಿಯವರೆಗೂ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಂದ್ಹಾಗೆ ಫೆಬ್ರವರಿಯಲ್ಲಿ ಟರ್ಕಿಯಲ್ಲಿ ಸಂಭವಿಸಿದ್ದ ಭೂಕಂಪದ ಸಮಯದಲ್ಲೂ ಭಾರತ ಹಿಂದೇಟು ಹಾಕದೇ ʻಆಪರೇಶನ್‌ ದೋಸ್ತ್‌ʼ ನಡೆಸಿತ್ತು. ಹಾಗೇ ಸುಡಾನ್‌ನ ಸೇನಾ ಸಂಘರ್ಷದಲ್ಲಿ ಸಿಲುಕಿರೋ ಭಾರತೀಯರನ್ನ ಕರೆತರಲು ʻಆಪರೇಶನ್‌ ಕಾವೇರಿʼ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಿತ್ತು.

-masthmagaa.com

Contact Us for Advertisement

Leave a Reply