ದಿವ್ಯಾ ಹಾಗರಗಿ ಜೊತೆ ಡಿಕೆಶಿ! ಕಾಂಗ್ರೆಸ್‌ ಅಂಗಳಕ್ಕೆ ಚಂಡು ತಳ್ಳಿದ ಬಿಜೆಪಿ

masthmagaa.com:

ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಾದರಿಯಲ್ಲಿ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ. ಪ್ರಕರಣದ ಪ್ರಮುಖ ಆರೋಪಿಯಾದ ದಿವ್ಯಾ ಹಾಗರಗಿ ಅಂದು ಪರಾರಿಯಾದವ್ರು ಇನ್ನೂ ಸಿಕ್ಕಿಲ್ಲ ಎಲ್ಲಿ ಹೋದ್ರು ಅಂತ ಸರ್ಕಾರದ ಮೇಲೆ ವ್ಯಾಪಕ ಟೇಕೆ ಆಗ್ತಾ ಇರೋ ಹೊತ್ತಲ್ಲೇ ಈಗ ಅವ್ರು ಡಿಕೆಶಿ ಜೊತೆಗೆ ಇರೋ ಫೋಟೊ ಹೊರಬಂದಿದೆ. ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್‌ ಜೊತೆ ದಿವ್ಯಾ ಹಾಗರಗಿ ಇರೋ ಫೋಟೋವನ್ನ ಟ್ವಿಟ್‌ ಮಾಡಿರೋ ಬಿಜೆಪಿ, ಚಂಡನ್ನು ಕಾಂಗ್ರೆಸ್‌ ಅಂಗಳಕ್ಕೆ ತಳ್ಳಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕೆಪಿಸಿಸಿ ಅ‍ಧ್ಯಕ್ಷ ಡಿಕೆ ಶಿವಕುಮಾರ್‌ ಹಾಗಾದ್ರೆ ಮೊದಲು ನನಗೆ ನೋಟಿಸ್‌ ನೀಡಲು ಹೇಳಿ. ನಾನು ಬಂದು ಉತ್ತರ ಕೊಡ್ತೀನಿ. ಯಾರಾದ್ರು ಬಂದು ನನ್ನ ಜೊತೆಗೆ ಫೋಟೊ ತೆಗೆಸಿಕೊಂಡಿರಬಹುದು ಅಂತ ಹೇಳಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟ ಮತ್ತೊಬ್ಬ ಆರೋಪಿಯನ್ನ ಪೋಲಿಸರು ಬಂಧಿಸಿದ್ದಾರೆ. ಎನ್‌.ವಿ ಸುನೀಲ್‌ ಕುಮಾರ್‌ ಎಂಬ ಈತ ಜ್ಞಾನ ಜ್ಯೋತಿ ಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ಪರೀಕ್ಷೆ ಬರಿದಿದ್ದಾನೆ ಅಂತ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply