ಟಿಕ್ ಟಾಕ್ ವಿಡಿಯೋಗಾಗಿ ಹಾವು ಹಿಡಿದು, ಡ್ಯಾನ್ಸ್ ಮಾಡಿ, ಸುಟ್ಟರು..!

masthmagaa.com:

ಗುಜರಾತ್: ಯುವ ಜನತೆಯಲ್ಲಿ ಟಿಕ್ ಟಾಕ್ ಹುಚ್ಚು ನೆತ್ತಿಗೇರುತ್ತಿದೆ. ಅದೇ ರೀತಿ ಯುವಕರ ಗುಂಪೊಂದು ಟಿಕ್ ಟಾಕ್ ವಿಡಿಯೋ ಮಾಡಲು ಹಾವನ್ನು ಹಿಡಿದಿದೆ. ನಂತರ ಅದೇ ಹಾವನ್ನು ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಅಷ್ಟಕ್ಕೇ ತೃಪ್ತಗೊಳ್ಳದ ದುಷ್ಟರ ಗುಂಪು ಹಾವನ್ನು ಕೊಂದು ಹಾಕಿ, ಬೆಂಕಿ ಹಚ್ಚಿ ಸುಟ್ಟಿದ್ದಾರೆ. ತಮ್ಮ ದುಷ್ಕೃತ್ಯದ ವಿಡಿಯೋವನ್ನು ಮಾಡಿ ಟಿಕ್​ಟಾಕ್​​ಗೆ ಅಪ್​​ಲೋಡ್ ಮಾಡಿದ್ದಾರೆ. ಆದ್ರೆ ಇವರ ಗ್ರಹಚಾರ ಕೆಟ್ಟಿತ್ತು ಅನ್ಸುತ್ತೆ. ಯಾಕಂದ್ರೆ ವಿಡಿಯೋ ವೈರಲ್ ಆಗ್ತಿದ್ದಂತೆ ಅರಣ್ಯ ಇಲಾಖೆ ವನ್ಯಜೀವಿ ಹಿಂಸೆ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಿಸಿ, ಅಂದರ್ ಮಾಡಿದ್ದಾರೆ. ಅಂದಹಾಗೆ ಗುಜರಾತ್​​ನ ಮಹೀಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

masthmagaa.com:

Contact Us for Advertisement

Leave a Reply