masthmagaa.com:

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ ಅಮೆರಿಕದಲ್ಲೂ ಮರಣ ಮೃದಂಗ ಬಾರಿಸುತ್ತಿದೆ. ಅಮೆರಿಕದಲ್ಲಿ ಇದುವರೆಗೆ 31 ಜನರನ್ನು ಬಲಿ ಪಡೆದಿರುವ ಮಹಾಮಾರಿ 1,037 ಜನರಿಗೆ ಹರಡಿದೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 30 ರಾಜ್ಯಗಳಲ್ಲಿ ಹೆಲ್ತ್​ ಎಮರ್ಜೆನ್ಸಿ ಘೋಷಿಸಲಾಗಿದೆ. ನ್ಯೂಯಾರ್ಕ್​, ಕ್ಯಾಲಿಫೋರ್ನಿಯಾ ಹಾಗೂ ವಾಷಿಂಗ್ಟನ್​ನಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ.

ಜಾಗತಿಕವಾಗಿ 1,13,000ಕ್ಕೂ ಹೆಚ್ಚು ಜನರಿಗೆ ತಗುಲಿರುವ ಕೊರೋನಾ ವೈರಸ್​ಗೆ 4 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ ಹೊಸದಾಗಿ ಪತ್ತೆಯಾಗುವ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಆಸ್ಪತ್ರೆಗಳು ಖಾಲಿ ಖಾಲಿಯಾಗಿವೆ. ಆದ್ರೆ ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್, ಅಮೆರಿಕದಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.

-masthmagaa.com

ಇನ್ನು ಕೊರೋನಾ ವೈರಸ್​ ಕುರಿತು masthmagaa.comನ ವಿಶೇಷ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

Contact Us for Advertisement

Leave a Reply