ದೇಶದಲ್ಲಿ ಕೊರೋನಾಗೆ 32 ಬಲಿ.. ಯಾವ ರಾಜ್ಯದಲ್ಲಿ ಎಷ್ಟು..?

masthmagaa.com:

ಜಾಗತಿಕ ಪಿಡುಗಾಗಿ ಕಾಡುತ್ತಿರೋ ಕೊರೋನಾ ಮಹಾಮಾರಿಗೆ ಪಂಜಾಬ್​ನ ಅಮೃತಸರದಲ್ಲಿ 62 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದು ಪಂಜಾಬ್​ನಲ್ಲಿ ಕೊರೋನಾ ಸೋಂಕಿಗೆ 2ನೇ ಬಲಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ 54 ವರ್ಷದ ಮಹಿಳೆ ಮೃತಪಟ್ಟಿದ್ದಾರೆ, ಇದು ಬಂಗಾಳದಲ್ಲಿ ಸಂಭವಿಸಿದ 2ನೇ ಸಾವಾಗಿದೆ. ಗುಜರಾತ್​ನ ಬಾವ್​ನಗರದಲ್ಲಿ 45 ವರ್ಷದ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇದು ಗುಜರಾತ್​ನಲ್ಲಿ ಸಂಭವಿಸಿದ 6ನೇ ಸಾವಾಗಿದೆ. ಈ ಮೂಲಕ ಕೊರೋನಾ ಸೋಂಕಿಗೆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಆದ್ರೆ ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಜೊತೆಗೆ ಒಟ್ಟು ಸೋಂಕಿತರ ಸಂಖ್ಯೆ 1,200 ಗಡಿ ದಾಟಿದೆ.

ಯಾವ ರಾಜ್ಯದಲ್ಲಿ ಎಷ್ಟು ಜನ ಸಾವು..?

ಮಹಾರಾಷ್ಟ್ರ – 8

ಗುಜರಾತ್ ​- 6

ಕರ್ನಾಟಕ – 3

ದೆಹಲಿ – 2

ಜಮ್ಮು-ಕಾಶ್ಮೀರ – 2

ಮಧ್ಯಪ್ರದೇಶ – 2

ಪಂಜಾಬ್ – 2

ಪಶ್ಚಿಮ ಬಂಗಾಳ – 2

ಬಿಹಾರ – 1

ಹಿಮಾಚಲ ಪ್ರದೇಶ – 1

ಕೇರಳ – 1

ತಮಿಳುನಾಡು – 1

ತೆಲಂಗಾಣ – 1

-masthmagaa.com

Contact Us for Advertisement

Leave a Reply