ರಫೇಲ್ ಮೇಲೆ ಓಂ ಬರೆಯದೇ ಇನ್ನೇನು ಬರೆಯಬೇಕಿತ್ತು: ರಾಜನಾಥ್ ಸಿಂಗ್ ಕಿಡಿ

ಹರಿಯಾಣ: ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡಿದ್ದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕಿಡಿಕಾರಿದ್ದಾರೆ. ಹರಿಯಾಣದ ಬಿವಾನಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಆಯುಧ ಪೂಜೆ ವೇಳೆ ರಫೇಲ್ ಮೇಲ್ ಓಂ ಎಂದು ಬರೆಯದೇ ಬೇರೆ ಇನ್ನೇರು ಬರೆಯಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ವಿಜಯದಶಮಿಯಂದು ಶಸ್ತ್ರ ಪೂಜೆ ಮಾಡೋದು ನಮ್ಮ ಪೂಜೆಯ ಪರಂಪರೆ. ನಾನು ರಫೇಲ್ ಮೇಲೆ ಓಂ ಬರೆದಾಗ ಕೆಲವರು ಪ್ರಶ್ನಿಸಲಾರಂಭಿಸಿದ್ರು. ನಾನು ರಾಹುಲ್ ಅವರ ಬಳಿ ಕೇಳಲು ಬಯಸುತ್ತೇನೆ. ಆಯುಧ ಪೂಜೆ ವೇಳೆ ಓಂ ಎಂದು ಬರೆಯದೇ ಬೇರೆ ಏನು ಬರೆಯಬೇಕು..?  ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಚಾರ. ಆದ್ರೆ ಕಾಂಗ್ರೆಸ್ ಈ ವಿಚಾರವನ್ನು ಅಂತಾರಾಷ್ಟ್ರೀಕರಣಗೊಳಿಸಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Contact Us for Advertisement

Leave a Reply