ಬರಲಿ..ನಾವ್ ರೆಡಿ…ಉಗ್ರರಿಗೆ ರಕ್ಷಣಾ ಸಚಿವರ ಎಚ್ಚರಿಕೆ..!

ಪಕ್ಕದ ದೇಶದ ಭಯೋತ್ಪಾದಕರಿಂದ ಭಾರತದ ಸಮುದ್ರ ಮಾರ್ಗ ಮತ್ತು ದಡದಲ್ಲೂ ದಾಳಿ ನಡೆಯಬಹುದು ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕೇರಳದ ಕೊಲ್ಲಂನಲ್ಲಿ ಆತ್ಮಾನಂದಮಯಿ ದೇವಿಯ 66ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಕ್ಕದ ದೇಶದ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ದಾಳಿ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಚ್‍ನಿಂದ ಕೇರಳದವರೆಗೆ ಇರೋ ಗಡಿಯಲ್ಲಿ ಉಗ್ರರನ್ನು ಎದುರಿಸಲು ಭಾರತವೂ ಸಿದ್ಧವಾಗಿದೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರ ಬಲಿದಾನವನ್ನು ದೇಶದ ಯಾವ ನಾಗರಿಕನೂ ಮರೆಯಲು ಸಾಧ್ಯವಿಲ್ಲ ಅಂದ್ರು. ಅಲ್ಲದೆ ಉಗ್ರರನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಉಗ್ರರನ್ನು ನೆಮ್ಮದಿಯಾಗಿ ಇರಲು ಬಿಡೋದಿಲ್ಲ ಅಂದ್ರು.

Contact Us for Advertisement

Leave a Reply