ಕೊರೋನಾ ವಿಚಾರವಾಗಿ ಕೇಂದ್ರಕ್ಕೆ ಸುಪ್ರೀಂ ಸಲಹೆ!

masthmagaa.com:

ಇನ್ನು ಕೊರೋನಾ ವಿಚಾರವಾಗಿ ಇವತ್ತು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದೆ. ಯಾವುದೇ ಆಸ್ಪತ್ರೆಗೆ ಯಾವುದೇ ರೋಗಿ ಬಂದ್ರೂ ಅಡ್ಮಿಟ್ ಮಾಡಿಕೊಳ್ಳಬೇಕು. ಸ್ಥಳೀಯ ಐಡೆಂಟಿಟಿ ಇಲ್ಲ.. ಅದಿಲ್ಲ ಇದಿಲ್ಲ ಅಂತ ಅಡ್ಮಿಟ್ ಮಾಡಿಕೊಳ್ಳಲು ಅಥವಾ ಔಷಧ ನೀಡಲು ನಿರಾಕರಿಸಬಾರದು ಅಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಜೊತೆಗೆ ಈ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೂ ಸೂಚನೆ ಕೊಟ್ಟಿದೆ. ಇನ್ನು ಕೇಂದ್ರ ಸರ್ಕಾರ ತನ್ನ ಲಸಿಕೆ ನೀತಿಯನ್ನು ಮರುಪರಿಶೀಲನೆ ನಡೆಸಬೇಕು. ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ ರಾಜ್ಯ ಸರ್ಕಾರಗಳಿಗೆ ನೀಡಿದ್ರೆ ಒಳ್ಳೆಯದು ಅಂತ ಸಲಹೆ ಕೊಟ್ಟಿದೆ. ಜೊತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಲಾಕ್​ಡೌನ್ ಮಾಡುವ ಬಗ್ಗೆಯೂ ಚಿಂತನೆ ನಡೆಸಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply