masthmagaa.com:

ವಾಯು ಮಾಲಿನ್ಯದ ವಿಚಾರದಲ್ಲಿ ಸದಾ ಸುದ್ದಿಯಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್, ಪೆಟ್ರೋಲ್​ ಮತ್ತು ಸೀಮೆ ಎಣ್ಣೆ ಚಾಲಿತ ಜನರೇಟರ್​ಗಳ ಬಳಕೆಯನ್ನು ಬ್ಯಾನ್ ಮಾಡಲಾಗಿದೆ. ನಾಳೆಯಿಂದಲೇ ಈ ನಿಷೇಧ ಜಾರಿಗೆ ಬರಲಿದೆ ಅಂತ ದೆಹಲಿಯ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಆದೇಶ ಹೊರಡಿಸಿದೆ. ಇದರಲ್ಲಿ ಎಲ್ಲಾ ಕೆಪಾಸಿಟಿಯ ಜನರೇಟರ್​ಗಳು ಸೇರಿವೆ. ಆದ್ರೆ ತುಂಬಾ ಅಗತ್ಯ ಮತ್ತು ತುರ್ತುಸೇವೆಗಳಿಗೆ ಬ್ಯಾನ್​ನಿಂದ ವಿನಾಯ್ತಿ ನೀಡಲಾಗಿದೆ. ಅಗತ್ಯ ಸೇವೆ ಅಂದ್ರೆ ಆಸ್ಪತ್ರೆಗಳು ಸೇರಿದಂತೆ ಇತರ ಸೇವೆಗಳು.

-masthmagaa.com

Contact Us for Advertisement

Leave a Reply