ವಿದೇಶದಿಂದ ಬಂದವರಲ್ಲಿ ಹೊಸ ರೂಪಾಂತರಿ ಕೊರೋನಾ ಪತ್ತೆ!

masthmagaa.com:

ಪುಣೆಯಲ್ಲಿರೋ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಕೊರೋನಾದ B.1.1.28.2 ಅನ್ನೋ ಹೊಸ ರೂಪಾಂತರಿ ತಳಿ ಪತ್ತೆಹಚ್ಚಿದ್ಧಾರೆ. ಇದು ಯುನೈಟೆಡ್ ಕಿಂಗ್​​ಡಮ್ ಮತ್ತು ಬ್ರೆಜಿಲ್​ನಿಂದ ಬಂದವರಲ್ಲಿ ಪತ್ತೆಯಾಗಿದೆ. ಈ ರೂಪಾಂತರಿ ವೈರಾಣು ಗಂಭೀರ ರೋಗ ಲಕ್ಷಣಗಳನ್ನು ಉಂಟುಮಾಡೋ ಸಾಧ್ಯತೆ ಇದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ಧಾರೆ. ಈ ಸಂಶೋಧನಾ ವರದಿಯನ್ನು ಬಯೋಆರ್​​​ಕ್ಸಿವ್​​​​ ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗಿದೆ. ವೇಷ ಮರೆಸಿಕೊಂಡು ಬಂದಿರೋ ಈ ವೈರಾಣು ಅಟಕಾಯಿಸಿಕೊಂಡ್ರೆ ದೇಹದ ತೂಕ ಕಡಿಮೆಯಾಗುತ್ತೆ. ಶ್ವಾಸವ್ಯವಸ್ಥೆಯಲ್ಲಿ ವೈರಾಣುವಿನ ಉಪಸ್ಥಿತಿ ಹೆಚ್ಚೋದ್ರ ಜೊತೆಗೆ ಶ್ವಾಸಕೋಶದಲ್ಲಿ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತೆ. ಕೋವ್ಯಾಕ್ಸಿನ್ 2 ಡೋಸ್ ಪಡೆದುಕೊಂಡ್ರೆ ಈ ವೈರಾಣು ಮಟ್ಟಹಾಕುವಲ್ಲಿ ಪರಿಣಾಮಕಾರಿ ಅಂತ ಕೂಡ ತಜ್ಞರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply