ನಿಸಾನ್ ಜೊಂಗದಲ್ಲಿ ಧೋನಿ ಓಡಾಟ..! ಮಾಹಿದು ಏನ್ ಕ್ರೇಜ್ ಗುರೂ

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದೇಶಪ್ರೇಮ ಎಲ್ಲರಿಗೂ ಗೊತ್ತು. ಅವರಿಗೆ ಕ್ರಿಕೆಟ್ ಮೇಲೆ ಎಷ್ಟು ಪ್ರೀತಿ ಇದ್ಯೋ ಅಷ್ಟೇ ಪ್ರೀತಿ ದೇಶದ ಸೇನೆ ಮೇಲೂ ಇದೆ. ಈಗಾಗಲೇ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್ ಹುದ್ದೆ ಪಡೆದಿರೋ  ಧೋನಿ, ಆಗಸ್ಟ್​ ತಿಂಗಳಲ್ಲಿ 15 ದಿನಗಳ ಕಾಲ ಸೇವೆಯನ್ನೂ ಸಲ್ಲಿಸಿದ್ದಾರೆ. ಇದ್ರ ಜೊತೆಗೆ ಧೋನಿಗೆ ಕಾರು. ಬೈಕ್​​​​​ಗಳ ಮೇಲೂ ತುಂಬಾ ಪ್ರೀತಿ ಇದೆ. ಅವರ ಬಳಿ ಈಗಾಗಲೇ ತುಂಬಾ ಕಾರು ಮತ್ತು ಬೈಕ್​​ಗಳಿವೆ. ಆಗಸ್ಟ್​ ತಿಂಗಳಲ್ಲಷ್ಟೇ ಅವರು ಗ್ರ್ಯಾಂಡ್ ಚಿರೋಕಿ ಜೀಪ್ ಪಡೆದಿದ್ದರು. ಸುಮಾರು 2 ತಿಂಗಳ ಬಳಿಕ ಧೋನಿ ಈಗ ಮತ್ತೊಂದು ಕಾರು ಖರೀದಿಸಿದ್ದಾರೆ. 2016ರ ಮಾಡಲ್​​ನ ಕಾರು ಇದಾಗಿದ್ದು, ಮಿಲಿಟರಿ ಜೀಪ್ ನಿಸಾನ್ ಜೊಂಗ ಇದಾಗಿದೆ.

ರಾಂಚಿಯಲ್ಲಿ ಒಂದು ಕಡೆ ಟೆಸ್ಟ್ ಪಂದ್ಯ ನಡೆಯುತ್ತಿದ್ರೆ, ಧೋನಿ ತಮ್ಮ ತವರಲ್ಲಿ ನಿಸಾನ್ ಜೊಂಗ ಜೀಪ್​ನೊಂದಿಗೆ ರಸ್ತೆಯಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಸ್ಥಳೀಯ ಪೆಟ್ರೋಲ್ ಬಂಕ್ ಒಂದಕ್ಕೆ ಹೋದಾಗ ಅಭಿಮಾನಿಗಳೆಲ್ಲಾ ಬಂದು ಸುತ್ತುವರಿದ್ರು. ಆಗ ಧೋನಿ ಯಾರಿಗೂ ನಿರಾಶೆ ಮಾಡದೆ, ಆಟೋಗ್ರಾಫ್, ಸೆಲ್ಫೀ ಕೊಟ್ಟು ಕಳುಹಿಸಿದ್ರು.

Contact Us for Advertisement

Leave a Reply