ಲವ್‌ ಬರ್ಡ್ಸ್‌ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಗಂಭೀರ ಆರೋಪ ಮಾಡಿದ ನಿರ್ದೇಶಕ ಶೇಖರ್‌!

masthmagaa.com:

ಇತ್ತೀಚಿಗಷ್ಟೇ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಅಭಿನಯಿಸಿದ ಲವ್‌ ಬರ್ಡ್ಸ್‌ ಚಿತ್ರ ರಿಲೀಸ್‌ ಆಗಿತ್ತು. ಚಿತ್ರಮಂದಿರದಲ್ಲಿ ಸದ್ದು ಮಾಡದ ಈ ಚಿತ್ರವನ್ನ ಒಟಿಟಿಯಲ್ಲೂ ರಿಲೀಸ್‌ ಮಾಡಿದ್ರು. ಸದ್ಯಕ್ಕೆ ಈ ಚಿತ್ರದ ಡೈರೆಕ್ಟರ್‌ ಮತ್ತು ಪ್ರೋಡ್ಯುಸರ್‌ ಕೋರ್ಟ್‌ ಮೆಟ್ಟಿಲೇರಿ ಸುದ್ದಿ ಆಗ್ತಾ ಇದಾರೆ. ಲವ್‌ ಬರ್ಡ್ಸ್‌ ಸಿನಿಮಾವನ್ನ ಒಟಿಟಿಯಲ್ಲಿ ರಿಲೀಸ್‌ ಮಾಡೋವಾಗ ನನ್ನ ಸಹಿಯನ್ನ ಫೋರ್ಜರಿ ಮಾಡಿ ರಿಲೀಸ್‌ ಮಾಡಿದ್ದಾರೆ ಅಂತ ಚಿತ್ರದ ಡೈರೆಕ್ಟರ್‌ ಪಿ.ಸಿ. ಶೇಖರ್‌ ಅವರು ಆರೋಪ ಮಾಡ್ತಾ ಇದಾರೆ.

“ಲವ್‌ ಬರ್ಡ್ಸ್‌ ಸಿನಿಮಾದ ನಿರ್ದೇಶನ ಮತ್ತು ಎಡಿಟಿಂಗ್‌ಗೆ ಅಂತ ಪ್ರೊಡ್ಯುಸರ್‌ ನನಗೆ 25 ಲಕ್ಷ ಮಾತಾಡಿದ್ರು. ಆದರೆ ಕೊನೆಗೆ 6.5 ಲಕ್ಷ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಅದಷ್ಟೇ ಅಲ್ಲದೇ ಒಟಿಟಿಗೆ ಸಿನಿಮಾವನ್ನ ರಿಲೀಸ್‌ ಮಾಡೋವಾಗ ನನ್ನ ಸಹಿ ಬೇಕಿತ್ತು. ನನ್ನ ಹತ್ತಿರ ಸಹಿಯನ್ನೂ ಕೇಳದೇ, ನನ್ನ ಸಹಿಯನ್ನ ನಕಲಿ ಮಾಡಿ ಒಟಿಟಿಗೆ ಸಿನಿಮಾವನ್ನ ರಿಲೀಸ್‌ ಮಾಡಿದ್ದಾರೆ. ನನಗೆ ಬರಬೇಕಿದ್ದ ಹಣವನ್ನೂ ಸಹ ಕೊಡಲಿಲ್ಲ. ಕೇಳೋಣ ಅಂತ ಹೋದ್ರೆ ನನಗೆ ಅವಾಜ್‌ ಹಾಕ್ತಾರೆ.” ಅಂತ ಆರೋಪ ಮಾಡಿದ್ದಾರೆ.

ಇನ್ನುಈ ಆರೋಪವನ್ನ ಚಿತ್ರದ ಪ್ರೋಡ್ಯುಸರ್‌ ಕಡ್ಡಿಪುಡಿ ಚಂದ್ರು ಅವರು ತಳ್ಳಿ ಹಾಕಿದ್ದಾರೆ. “ಶೇಖರ್‌ ಅವರು ತಮ್ಮ ಪತ್ನಿ ಹಾಗೂ ಅಣ್ಣನಿಗೂ ಸಂಭಾವನೆ ಕೊಡಲು ಒತ್ತಾಯಿಸ್ತಾ ಇದಾರೆ. ನಾನು ಎಲ್ಲಾ ಕಲಾವಿದರಿಗೂ ದುಡ್ಡು ಕೊಟ್ಟು ಮುಗಿಸಿದೀನಿ. ನಾನು ಲಾಸ್‌ ಅಲ್ಲಿ ಇದ್ರೂ ಕೂಡ ಅವರೆಲ್ಲರ ದುಡ್ಡನ್ನ ಕೊಟ್ಟಿದೀನಿ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply