ಪೊಲೀಸರು ಆಡಳಿತಾರೂಢ ಪಕ್ಷಗಳಿಗೆ ಸಪೋರ್ಟ್ ಮಾಡ್ತಿದೆ: ಸುಪ್ರೀಂ ಕೆಂಡ

masthmagaa.com:

ದೇಶದಲ್ಲಿ ಪೊಲೀಸರು ಆಡಳಿತಾರೂಢ ಪಕ್ಷಗಳಿಗೆ ಸಪೋರ್ಟ್ ಮಾಡ್ತಿರೋದನ್ನ ಸುಪ್ರೀಂಕೋರ್ಟ್​ ಟೀಕಿಸಿದೆ. ಅಧಿಕಾರದಲ್ಲಿರೋ ರಾಜಕೀಯ ಪಕ್ಷಗಳಿಗೆ ಒಳ್ಳೆಯವರಾಗೋ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ವಿಪಕ್ಷ ನಾಯಕರಿಗೆ ಕಿರುಕುಳ ಕೊಡ್ತಿದ್ದಾರೆ. ಆದ್ರೆ ಅದು ಸರಿಯಲ್ಲ. ಪೊಲೀಸರು ಕಾನೂನಿನಿಗೆ ಬದ್ಧವಾಗಿರಬೇಕು ಅಂತ ಸುಪ್ರೀಂಕೋರ್ಟ್​​ ಸಿಜೆ ಎನ್​ವಿ ರಮಣ ಆಗ್ರಹಿಸಿದ್ದಾರೆ. ಅಂದಹಾಗೆ ಛತ್ತೀಸ್​ಗಡ ಸರ್ಕಾರ ಐಪಿಎಸ್ ಅಧಿಕಾರಿ ಗಜೇಂದ್ರ ಪಾಲ್ ಸಿಂಗ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ, ಭಷ್ಟಾಚಾರ ಆರೋಪ ಹೊರಿಸಿದೆ. ಸಸ್ಪೆಂಡ್ ಮಾಡಿ, ದೇಶದ್ರೋಹ ಕೇಸ್ ಕೂಡ ಹಾಕಿದೆ. ಈ ಹಿಂದೆ ನಾನು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಹತ್ತಿರವಾಗಿದ್ರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ನನಗೆ ಹೀಗೆ ಮಾಡ್ತಿದೆ ಅಂತ ಗಜೇಂದ್ರ ಪಾಲ್ ಸಿಂಗ್ ಆರೋಪಿಸಿದ್ರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​, ಗಜೇಂದ್ರ ಪಾಲ್ ಸಿಂಗ್​ರನ್ನು ಬಂಧಿಸದಂತೆ ಸೂಚಿಸಿ, ಪೊಲೀಸರಿಗೂ ಈ ಮೇಲಿನ ಕಠಿಣ ಸಂದೇಶ ನೀಡಿದೆ.

-masthmagaa.com

Contact Us for Advertisement

Leave a Reply