ಡಿಕೆಶಿಗೆ ಈ ದಿನ ತುಂಬಾ ಇಂಪಾರ್ಟೆಂಟ್​..! ಯಾಕೆ ಗೊತ್ತಾ..?

ದೆಹಲಿ: ಇವತ್ತು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ತುಂಬಾ ಇಂಪಾರ್ಟೆಂಟ್ ದಿನ ಅಂತ ಹೇಳಬಹುದು. ಯಾಕಂದ್ರೆ ಡಿ.ಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಇಂದು ಕೊನೆಗೊಳ್ಳಲಿದೆ. ಹೀಗಾಗಿ ಇವತ್ತು ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ ಮುಂದೆ ಹಾಜರಾಗಲಿದ್ದಾರೆ. ನ್ಯಾಯಾಲಯ ಮತ್ತಷ್ಟು ದಿನ ನ್ಯಾಯಾಂಗ ಬಂಧನ ವಿಸ್ತರಿಸುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಇನ್ನು ಹೈಕೋರ್ಟ್​​​ನಲ್ಲಿಂದು ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಕೂಡ ವಿಚಾರಣೆಗೆ ಬರಲಿದೆ. ನಿನ್ನೆ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​​​​ ಇಂದು ಮಧ್ಯಾಹ್ನ 3.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು. ಅದರಂತೆ ಇಂದು ಡಿ.ಕೆ.ಶಿವಕುಮಾರ್ ಪರ ವಕೀಲರು ವಾದ ಮಂಡಿಸಲಿದ್ದಾರೆ. ಅದೇ ರೀತಿ ಗುರುವಾರ ಮತ್ತು ಶುಕ್ರವಾರ ಇಡಿ ಪರ ವಕೀಲರು ವಾದ ಮಂಡಿಸಲಿದ್ದಾರೆ.

ಇದ್ರ ನಡುವೆ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರಿಗೂ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಡಿಕೆಶಿ ಸಹೋದರ ಡಿ.ಕೆ ಸುರೇಶ್ ಹೇಳಿದ್ದಾರೆ. ಆದ್ರೆ ಗೌರಮ್ಮ ಹಾಗೂ ಉಷಾ ಶಿವಕುಮಾರ್ ಅವರಿಗೆ ಅಕ್ಟೋಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರೋದಾಗಿ ಇಡಿ ಮೂಲಗಳು ತಿಳಿಸಿವೆ.

Contact Us for Advertisement

Leave a Reply