ಹಿಜ್ಬುಲ್ ಕಮಾಂಡರ್ ಫಿನಿಶ್.. ‘ಉಗ್ರ ಮುಕ್ತ’ ಜಿಲ್ಲೆಯಾಯ್ತು ಡೋಡಾ

masthmagaa.com:

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಮಸೂದ್​ನನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯು ಸಂಪೂರ್ಣವಾಗಿ ‘ಉಗ್ರ ಮುಕ್ತ’ ಜಿಲ್ಲೆಯಾಗಿದೆ ಅಂತ ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್​ ಸಿಂಗ್ ಹೇಳಿದ್ದಾರೆ.

ಪಾಕ್ ಸ್ಟಾಕ್ ಎಕ್ಸ್​ಚೇಂಜ್ ಮೇಲೆ ಅಟ್ಯಾಕ್ ಮಾಡಿದ್ದ ಉಗ್ರರು ಫಿನಿಶ್

ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮಸೂದ್ ಮತ್ತು ಲಷ್ಕರ್ ಸಂಘಟನೆಯ ಇಬ್ಬರು ಉಗ್ರರನ್ನು ಅನಂತ್​ನಾಗ್ ಜಿಲ್ಲೆಯ ಖುಲ್ಚೊಹಾರ್​ ಎಂಬಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಮೂಲಕ ಡೋಡಾ ಜಿಲ್ಲೆ ಮತ್ತೊಮ್ಮೆ ಉಗ್ರರಿಂದ ಮುಕ್ತವಾಗಿದೆ ಅಂತ ಅವರು ಹೇಳಿದ್ದಾರೆ.

ಅಂದ್ಹಾಗೆ ಡೋಡಾ ಜಿಲ್ಲೆಯವನಾದ ಮಸೂದ್ ವಿರುದ್ಧ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಆತ ತಲೆ ಮರೆಸಿಕೊಂಡಿದ್ದ. ಬಳಿಕ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಸೇರಿ ಕಾಶ್ಮೀರಕ್ಕೆ ಹೋಗಿದ್ದ ಅಂತ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಐದೇ ದಿನದಲ್ಲಿ ಕೊರೋನಾ ಪ್ರಕರಣಗಳು ಡಬಲ್..!

ಜಮ್ಮು-ಕಾಶ್ಮೀರದಲ್ಲಿ ಕಳೆದ ಹಲವು ದಿನಗಳಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿದಿನವೂ ಉಗ್ರರ ಹೆಡೆಮುರಿ ಕಟ್ಟಲಾಗುತ್ತಿದೆ. ಇದೀಗ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

-masthmagaa.com

Contact Us for Advertisement

Leave a Reply