ಕೋರೋನಗೆ ಹೋಗೋ ಕಾಲ? WHO ಹೇಳಿದ್ದೇನು?

masthmagaa.com:

ಯೂರೋಪ್​​ನಲ್ಲಿ ಕೊರೋನಾ ಅಂತ್ಯದತ್ತ ಸಾಗುತ್ತಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಹ್ಯಾನ್ಸ್​ ಕ್ಲೂಜ್ ಹೇಳಿದ್ದಾರೆ. ಒಮೈಕ್ರಾನ್​​​ ರೂಪಾಂತರಿ ಕೊರೋನಾ ಕಾಯಿಲೆಯನ್ನೇ ಬೇರೆ ಹಂತಕ್ಕೆ ತೆಗೆದುಕೊಂಡು ಹೋಯ್ತು. ಯೂರೋಪಿನಲ್ಲಿ ಕೊರೋನವನ್ನು ಅಂತ್ಯದತ್ತ ಕರ್ಕೊಂಡು ಹೋಗ್ತಿದೆ ಅಂತ ಹೇಳಿದ್ದಾರೆ. ಮಾರ್ಚ್​ ಅಂತ್ಯದ ವೇಳೆಗೆ ಯೂರೋಪಿನ 60 ಪರ್ಸೆಂಟ್​​ನಷ್ಟು ಜನರಿಗೆ ಒಮೈಕ್ರಾನ್ ಸೋಂಕು ತಗುಲುತ್ತೆ. ಇದಾದ ಬಳಿಕ ಇಡೀ ಯೂರೋಪಿನಲ್ಲಿ ಕೊರೋನಾ ಕಡಿಮೆಯಾಗೋಕೆ ಶುರುವಾಗುತ್ತೆ. ಇದ್ರಿಂದ ಮುಂದಿನ ಹಲವು ತಿಂಗಳವರೆಗೆ ಜನರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತೆ ಅಂತ ಕ್ಲೂಜ್ ಹೇಳಿದ್ದಾರೆ. ಕೊರೋನಾ ವರ್ಷದ ಅಂತ್ಯದಲ್ಲಿ ಮತ್ತೆ ಬರುವ ಮುನ್ನ ತುಂಬಾ ಟೈಂ ಸಿಗುತ್ತೆ. ಆದ್ರೆ ಕೊರೋನಾ ಮತ್ತೆ ಬರಲೇಬೇಕು ಅಂತೇನೂ ಇಲ್ಲ ಅಂತ ಹೇಳಿದ್ದಾರೆ. ಅಮೆರಿಕದ ಟಾಪ್ ವೈದ್ಯಕೀಯ ಸಲಹೆಗಾರ ಅಂಥೋಣಿ ಫೌಚಿ ಕೂಡ ನಿನ್ನೆ ಇದೇ ಮಾತುಗಳನ್ನು ಹೇಳಿದ್ರು.

-masthmagaa.com

Contact Us for Advertisement

Leave a Reply