ಎಣ್ಣೆ ಕುಡಿದ್ರೆ ಕೊರೋನಾ ವೈರಸ್ ಹೋಗಲ್ಲ: ವಿಶ್ವ ಆರೋಗ್ಯ ಸಂಸ್ಥೆ

masthmagaa.com:

ಕೊರೋನಾ ವೈರಸ್ ವಿಶ್ವದೆಲ್ಲೆಡೆ ಅತಿ ವೇಗವಾಗಿ ಹಬ್ಬುತ್ತಿದೆ. ಭಾರತದಲ್ಲೂ ಕೊರೋನಾ ವೈರಸ್​​​ನ 39 ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ ವಾಟ್ಸಾಪ್​, ಫೇಸ್​ಬುಕ್​​ಗಳಲ್ಲಿ ಕೊರೋನಾ ವೈರಸ್​​​​ಗೆ ಸಂಬಂಧಿಸಿದಂತೆ ಹಲವಾರು ವದಂತಿಗಳು ಹಬ್ಬುತ್ತಿವೆ. ಎಲ್ಲರೂ ಡಾಕ್ಟರ್ ರೀತಿ ತಮ್ಮದೇ ಸಲಹೆಗಳನ್ನು ಹರಿಬಿಡ್ತಿದ್ದಾರೆ. ಅದೇ ರೀತಿ ಒಂದು ದೊಡ್ಡ ಸುಳ್ಳು ವದಂತಿ ಹರಡುತ್ತಿರೋದು ಮದ್ಯ ಸೇವನೆ ಅಥವಾ ಮದ್ಯ ಸಿಂಪಡಿಸಿದ್ರೆ ಕೊರೋನಾ ಸೋಂಕಿನಿಂದ ಪಾರಾಗಬಹುದು ಅನ್ನೋದು. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೊರೋನಾವನ್ನು ಮದ್ಯದಿಂದ ತಡೆಯೋದು ಸಾಧ್ಯವಿಲ್ಲ ಎಂದಿದೆ.

ಮೈತುಂಬಾ ಮದ್ಯ ಅಥವಾ ಕ್ಲೋರಿನ್ ಸಿಂಪಡಿಸಿದ್ರೆ ಈಗಾಗಲೇ ದೇಹದ ಒಳಗೆ ಹೋಗಿರುವ ವೈರಸ್​​ಗಳು ಸಾಯೋದಿಲ್ಲ. ಬದಲಾಗಿ ಕಣ್ಣು ಮತ್ತು ಬಾಯಿಗೆ ಹಾನಿಕರವಾಗಬಹುದು ಅಂತ ತಿಳಿಸಿದೆ. ಜೊತೆಗೆ ಮದ್ಯ ಮತ್ತು ಕ್ಲೋರಿನ್​​ ಬಳಸಿ ವೈರಸ್​​ನಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಬಹುದು. ಆದ್ರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಎಂದು ಮಾಹಿತಿ ನೀಡಿದೆ. ಹ್ಯಾಂಡ್​ವಾಶ್ ಮಾಡುವಾಗ ಅಲ್ಕೋಹಾಲಿಕ್ ಅಂಶವುಳ್ಳ ಹ್ಯಾಂಡ್​ವಾಶ್​​​ನಿಂದ ಕೈ ತೊಳೆಯೋದು ಒಳ್ಳೆಯ ಅಭ್ಯಾಸ. ಹಾಗಂತ ಮೈತುಂಬಾ ಸಿಂಪಡಿಸೋದು ಒಳ್ಳೆಯದಲ್ಲ ಅಂತ ಹೇಳಿದೆ.

masthmagaa.com:

Contact Us for Advertisement

Leave a Reply