ಪಿಒಕೆಯಲ್ಲಿ ಭೂಕಂಪ.. 26 ಮಂದಿ ಸಾವು..

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿನ್ನೆ ದೊಡ್ಡ ಮಟ್ಟದಲ್ಲಿ ಭೂಕಂಪ ಸಂಭವಿಸಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೆಡೆ ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದ್ದು, ಇನ್ನು ಕೆಲವು ಕಡೆ 7.1ರಷ್ಟು ತೀವ್ರತೆ ದಾಖಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೀರ್‍ಪುರ ನಗರ ಭೂಕಂಪದ ಕೇಂದ್ರ ಬಿಂದುವಾಗಿದ್ದು, 10 ಕಿಲೋ ಮೀಟರ್ ಆಳದಲ್ಲಿ ಕಂಪನವಾಗಿದೆ. ಇಸ್ಲಾಮಾಬಾದ್, ಪೆಶಾವರ, ರಾವಲ್ಪಿಂಡಿ, ಲಾಹೋರ್ ಸೇರಿದಂತೆ ಹಲವು ನಗರಗಳಿಗೂ ಭೂಕಂಪದ ಬಿಸಿ ತಟ್ಟಿದೆ. ಹಲವು ಕಟ್ಟಡಗಳು ಕುಸಿದಿದ್ದು, ಮೀರ್‍ಪುರದಲ್ಲಿ ರಸ್ತೆಗಳು ಬಿರುಕುಬಿಟ್ಟು ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇನ್ನು ಉತ್ತರ ಭಾರತದಲ್ಲೂ ಭೂಕಂಪನ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿಲ್ಲ.

Contact Us for Advertisement

Leave a Reply