ಅನಿಲ್ ದೇಶ್ ಮುಖ್​ರ 4.2 ಕೋಟಿ ಆಸ್ತಿ ಸೀಜ್!

masthmagaa.com:

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖಾ ಸಂಸ್ಥೆ ಜಾರಿ ನಿರ್ದೆಶನಾಲಯ ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್ ದೇಶ್​ಮುಖ್​​ಗೆ ಸೇರಿದ 4.2 ಕೋಟಿ ರೂಪಾಯಿ ಆಸ್ತಿ ಸೀಜ್ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಂಡಿರೋದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇವರು ಗೃಹಸಚಿವರಾಗಿದ್ದಾಗ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸಲು ಪೊಲೀಸರಿಗೆ ಟಾರ್ಗೆಟ್ ಕೊಟ್ಟಿದ್ರು ಅನ್ನೋ ಆರೋಪ ಕೇಳಿ ಬಂದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆದ್ರೆ ಈ ಪ್ರಕರಣ ಸಂಬಂಧ ಇತ್ತೀಚಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಕೊಟ್ರೂ ಹಾಜರಾಗಿರಲಿಲ್ಲ. ಈಗ ಆಸ್ತಿ ಸೀಜ್ ಮಾಡಿ ಉತ್ತರ ಕೊಟ್ಟಿದೆ. ಜೊತೆಗೆ ಅವರ ಪುತ್ರ ಮತ್ತು ಪತ್ನಿಗೂ ಇಡಿ ನೋಟಿಸ್ ನೀಡಿದೆ.

-masthmagaa.com

Contact Us for Advertisement

Leave a Reply