ಉತ್ತರ ಪ್ರದೇಶ ರಿಸಲ್ಟ್‌: ಯಾರು ಮುಂದೆ, ಯಾರು ಹಿಂದೆ? ಇಲ್ಲಿದೆ ನೋಡಿ

masthmagaa.com:

ಪಂಚರಾಜ್ಯ ಫಲಿತಾಂಶ
ಉತ್ತರಪ್ರದೇಶ
403
ಮ್ಯಾಜಿಕ್​ ನಂ. – 202

ಮುನ್ನಡೆ/ಫಲಿತಾಂಶ
ಬಿಜೆಪಿ+: 259
ಎಸ್​ಪಿ+: 124
ಬಿಎಸ್​ಪಿ: 5
ಕಾಂಗ್ರೆಸ್​: 3
ಇತರೆ: 7

– ಯುಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯೋ ಲಕ್ಷಣ ದಟ್ಟವಾಗಿದೆ. ಆದ್ರೆ ಕಳೆದ ಬಾರಿಗಿಂತ ಸೀಟ್ಸ್​ ಸ್ವಲ್ಪ ಕಮ್ಮಿ ಬರೋ ಥರ ಕಾಣ್ತಿದೆ.
– ಗೋರಖ್​ಪುರ ನಗರ ಕ್ಷೇತ್ರದಲ್ಲಿ ಹಾಲಿ ಸಿಎಂ, ಬಿಜೆಪಿಯ ಯೋಗಿ ಆದಿತ್ಯನಾಥ್​ಗೆ ಭರ್ಜರಿ ಮುನ್ನಡೆ.
– ಕರ್​​ಹಲ್​ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ಗೆ ಭಾರಿ ಮುನ್ನಡೆ. ಬಿಜೆಪಿಯ ಎಸ್​ಪಿ ಸಿಂಗ್​ ಭಗೇಲ್​ ಹಿನ್ನಡೆ.
– ರಾಂಪುರ್​​ ಕ್ಷೇತ್ರದಲ್ಲಿ ಎಸ್​ಪಿ ಸಂಸದ ಆಝಂ ಖಾನ್​ಗೆ ಭರ್ಜರಿ ಮುನ್ನಡೆ. ಜೈಲಿಂದಲೇ ಸ್ಫರ್ಧೆ ಮಾಡ್ತಿರೋ ಆಝಂ ಖಾನ್.
– ರಾಯ್​ಬರೇಲಿಯಲ್ಲಿ ಬಿಜೆಪಿಯ ಅದಿತಿ ಸಿಂಗ್​ಗೆ ಭಾರಿ ಮುನ್ನಡೆ. ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ದ ಅದಿತಿ ಸಿಂಗ್. ರಾಯ್​ಬರೇಲಿ ಲೋಕಸಭಾ ಕ್ಷೇತ್ರ ಸೋನಿಯಾ ಗಾಂಧಿ ಎಂಪಿ ಆಗಿರೋ ಕ್ಷೇತ್ರ. ಆದ್ರೀಗ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭಾರಿ ಹಿನ್ನಡೆ ಅನುಭವಿಸಿದೆ.
– ಉನ್ನಾವೋದಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್​ಗೆ ಭಾರಿ ಹಿನ್ನಡೆ. ಬಿಜೆಪಿ ಮುನ್ನಡೆ.
-masthmagaa.com

Contact Us for Advertisement

Leave a Reply