ಪಂಚಸೋಲಿನ ಬಳಿಕ ಕೈ ಸಭೆ! ರಾಹುಲ್ ಪಟ್ಟಕ್ಕೇರಿಸಲು ಆಗ್ರಹ!

masthmagaa.com:

ಪಂಚರಾಜ್ಯಗಳ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್​​​ ಇವತ್ತು ಕಾರ್ಯಕಾರಿ ಸಮಿತಿ ಸಭೆ ನಡೆಸಿದೆ. ಇದ್ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ 57 ನಾಯಕರು ಭಾಗಿಯಾಗಿದ್ರು. ಇದ್ರಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಮತ್ತು ಮುಂದಿನ ತಂತ್ರಗಾರಿಕೆ ಕುರಿತು ಚರ್ಚಿಸಲಾಯ್ತು.. ಆದ್ರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಚಿವ ಎಕೆ ಆ್ಯಂಟನಿ ಸೇರಿದಂತೆ ಹಲವು ಹಿರಿಯ ನಾಯಕರು ಗೈರಾಗಿದ್ದಾರೆ. ಮಹಾಸೋಲಿನ ಬಳಿಕ ಜಿ23 ನಾಯಕರು ಕೂಡ ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ರು. ಈ ಸಭೆಯಲ್ಲಿ ಗಾಂಧಿ ಕುಟುಂಬ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದೆ ಅಂತಲೇ ಭಾವಿಸಲಾಗಿತ್ತು. ಆದ್ರೆ ಇವತ್ತಿನ ಸಭೆಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯೇ ನಾಯಕತ್ವ ವಹಿಸಿಕೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ.. ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಅಂತ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆದಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪರ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಇನ್ನು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮಾತನಾಡಿ, ನಮಗೆ ಗಾಂಧಿ ಕುಟುಂಬದಲ್ಲಿ ನಂಬಿಕೆ ಇದೆ. ಪ್ರಧಾನಿ ಮೋದಿಯನ್ನು ಎದುರಿಸಲು ರಾಹುಲ್ ಗಾಂಧಿಯೇ ಸೂಕ್ತ.. ಮೋದಿ ಮಾತನಾಡುವಾಗ ರಾಹುಲ್ ಗಾಂಧಿ ಹೆಸರು ಹೇಳ್ತಾರೆ ಅಂದ್ರೆ ಎಲ್ಲರೂ ಅರ್ಥ ಮಾಡ್ಕೊಳ್ಳಬೇಕು ಅಂತ ಹೇಳಿದ್ದಾರೆ. ಇನ್ನು ಶಶಿ ತರೂರ್ ಟ್ವೀಟ್ ಮಾಡಿದ್ದು, ಕಾಂಗ್ರೆಸ್ಸನ್ನು ಸುಧಾರಿಸಿ, ಪುನರುಜ್ಜೀವನಗೊಳಿಸೋ ಅಗತ್ಯತೆ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply