ಬಿಟ್​​ಕಾಯಿನ್ ವಿಚಾರದಲ್ಲಿ ಎಲಾನ್ ಮಸ್ಕ್​​ ಟ್ವೀಟಾಟ!

masthmagaa.com:

ಕ್ರಿಪ್ಟೋ ಕರೆನ್ಸಿ ಬಿಟ್​ಕಾಯಿನ್ ವಿಚಾರದಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ಟ್ವೀಟ್ ಆಟ ಮುಂದುವರಿಸಿದ್ದಾರೆ. ಒಂದ್ವೇಳೆ ಬಿಟ್​ಕಾಯಿನ್ ಮೈನಿಂಗ್ ಮಾಡೋರು ಸ್ವಚ್ಛವಾದ ಇಂಧನ ಬಳಸಿದ್ರೆ ಟೆಸ್ಲಾ ಪುನಃ ಬಿಟ್​​​ಕಾಯಿನ್ ಮೂಲಕ ವ್ಯವಹಾರ ನಡೆಸುತ್ತೆ ಅಂತ ಟ್ವೀಟ್ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಬಿಟ್​​ ಕಾಯಿನ್ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, 39 ಸಾವಿರ ಡಾಲರ್ ಅಂದ್ರೆ 28.47 ಲಕ್ಷ ಗಡಿ ದಾಟಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಬಿಟ್​ಕಾಯಿನ್ ತಗೋತೀವಿ ಅಂತ ಎಲಾನ್ ಮಸ್ಕ್ ಘೋಷಿಸಿದ್ರು. ಆಗ ಬಿಟ್​​ಕಾಯಿನ್ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಆದ್ರೆ ಮೇ ತಿಂಗಳಲ್ಲಿ ಉಲ್ಟಾ ಹೊಡೆದಿದ್ದ ಎಲಾನ್​ ಮಸ್ಕ್​​​, ಬಿಟ್​​ ಕಾಯಿನ್​​​ ಮೈನಿಂಗ್​​ಗೆ ಹೆಚ್ಚಿನ ಎನರ್ಜಿ ಖರ್ಚಾಗುತ್ತೆ. ಹೀಗಾಗಿ ಪರಿಸರ ಹಾನಿ ದೃಷ್ಟಿಯಿಂದ ಬಿಟ್​ ಕಾಯಿನ್ ಮೂಲಕ ವ್ಯವಹರಿಸೋ ನಿರ್ಧಾರದಿಂದ ಹಿಂದೆ ಸರಿಯುತ್ತಿರೋದಾಗಿ ಘೋಷಿಸಿದ್ರು. ಇದ್ರ ಬೆನ್ನಲ್ಲೇ ಬಿಟ್ ಕಾಯಿನ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು. ಇದೀಗ ಮತ್ತೆ ಬಿಟ್ ಕಾಯಿನ್ ತಗೊಳ್ಳೋದಾಗಿ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply