ತಮ್ಮ ಜೊತೆ ಕೆಲಸ ಮಾಡಿದ ಅಫ್ಘನ್​ ಪ್ರಜೆಗಳ ಗುರುತು ಬಿಟ್ಟುಹೋದ ಯುಕೆ!

masthmagaa.com:

ತಾಲಿಬಾನಿಗಳು ಮಿಂಚಿನ ವೇಗದಲ್ಲಿ ಅಫ್ಘನಿಸ್ತಾನವನ್ನ ಟೇಕೋವರ್​ ಮಾಡಿದ ಬೆನ್ನಲ್ಲೇ ವಿವಿಧ ದೇಶಗಳು ಅರ್ಜೆಂಟ್​ ಅರ್ಜೆಂಟ್​​ನಲ್ಲಿ ಮಾಡಿದ ಒಂದೊಂದೇ ಯಡವಟ್ಟುಗಳು ಬೆಳಕಿಗೆ ಬರ್ತಿವೆ. ಈಗ ಯುಕೆ ಸರದಿ. ಕಾಬೂಲ್​​ನ ರಾಯಭಾರ ಕಚೇರಿಯಿಂದ ಯುಕೆ ಅಧಿಕಾರಿಗಳು ಜಾಗ ಖಾಲಿ ಮಾಡಿ ಹೋಗ್ಬೇಕಾದ್ರೆ, ತಮ್ಮ ಜೊತೆ ಕೆಲಸ ಮಾಡ್ತಿದ್ದ ಅಫ್ಘನ್​ ಪ್ರಜೆಗಳ ದಾಖಲೆಗಳನ್ನ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಆ ಅಫ್ಘನ್​ ಪ್ರಜೆಗಳ ಕಾಂಟ್ಯಾಕ್ಟ್ ಡಿಟೇಲ್ಸ್ ಇತ್ತು ಅನ್ನೋದು ಗೊತ್ತಾಗಿದೆ. ಮೊದಲೇ ತಾಲಿಬಾನಿಗಳು ಹಿಂದಿನ ಸರ್ಕಾರದಲ್ಲಿದ್ದವರನ್ನ ಟಾರ್ಗೆಟ್ ಮಾಡ್ತಿದೆ ಅನ್ನೋ ವರದಿಯಾಗ್ತಿದೆ. ಅಂಥದ್ರಲ್ಲಿ ಯುಕೆ ಅಧಿಕಾರಿಗಳು ತಮ್ಮ ಜೊತೆ ಕೆಲಸ ಮಾಡ್ತಿದ್ದ ಅಫ್ಘನ್​ ಪ್ರಜೆಗಳ ದಾಖಲೆಗಳನ್ನ ಬಿಟ್ಟುಹೋಗಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಯುಕೆ ವಿದೇಶಾಂಗ ಇಲಾಖೆ ಅಧಿಕಾರಿಗಳು, ಕಾಬೂಲ್​ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆ ಹೀಗಾಯ್ತು. ಸೂಕ್ಷ್ಮ ದಾಖಲೆಗಳನ್ನ ನಾಶ ಮಾಡುವ ಎಲ್ಲಾ ಪ್ರಯತ್ನಗಳು ನಡೀತಿವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply