ಇಸ್ರೇಲ್‌-ಪ್ಯಾಲೆಸ್ತೇನ್‌ ನಡುವೆ ಶಾಂತಿ ಸ್ಥಾಪನೆಗೆ ಕರೆ: ಯುರೋಪ್‌, ಅಮೇರಿಕ

masthmagaa.com:

ಇಸ್ರೇಲ್‌ ಮತ್ತು ಪ್ಯಾಲೆಸ್ತೇನ್‌ ಸಂಘರ್ಷವನ್ನ ನಿಲ್ಲಿಸ್ಬೇಕು ಅಂತ ಐದು ಯುರೋಪಿಯನ್‌ ದೇಶಗಳು ಕರೆ ನೀಡಿವೆ. ಇತ್ತೀಚೆಗೆ ಜೆರುಸೇಲಂನಲ್ಲಿ ನಡೆದ ಸಂಘರ್ಷದಿಂದ ಉಭಯ ಬಣಗಳ ನಡುವಿನ ಉದ್ವಿಗ್ನತೆ ಹೆಚ್ಚಾಗ್ತಿದ್ದು ಈ ಸಂಬಂಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆಯನ್ನ ಕರೆದಿತ್ತು. ಇದ್ರಲ್ಲಿ ಫ್ರಾನ್ಸ್‌, ಐರ್‌ಲ್ಯಾಂಡ್‌, ಈಸ್ಟೋನಿಯ, ನಾರ್ವೇ ಮತ್ತು ಅಲ್ಬೇನಿಯಾ ಪಾಲ್ಗೊಂಡು ಜಂಟಿ ಹೇಳಿಕೆಯನ್ನ ನೀಡಿವೆ. ಅದ್ರಲ್ಲಿ, ಹಿಂಸಾಚಾರ ತತಕ್ಷಣವೇ ನಿಲ್ಬೇಕು. ಹೆಚ್ಚಿನ ನಾಗರಿಕರು ಬಲೆಯೋಗಾದನ್ನ ತಡೆಯಬೇಕು ಅಂತ ಆಗ್ರಹಿಸಿವೆ. ಇನ್ನ ಯುಎಇ ಮತ್ತು ಚೀನಾ ಕೂಡ ಸಭೆಯನ್ನ ಕರೆದಿದ್ವು ಆದ್ರೆ ಅವ್ರು ಜಂಟಿ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ. ಇನ್ನ ಆ ಕಡೆ ಅಮೇರಿಕ ಕೂಡ ಸಂಘರ್ಷವನ್ನ ಖಂಡಿಸಿದ್ದು, ಹಿಂಸಾಚಾರದ ಚಕ್ರವನ್ನ ನಿಲ್ಲಿಸ್ಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply