ಮಂಡಿಯೂರಿ ಬೇಡಿಕೊಳ್ಳುತ್ತೀನಿ – ಪೋಪ್‌ ಫ್ರಾನ್ಸಿಸ್‌ ನೋವಿನ ಮಾತು!

masthmagaa.com:

ಮಯನ್ಮಾರ್​ನಲ್ಲಿ ಮಿಲಿಟರಿ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಅದರ ಜೊತೆಗೆ ಹಿಂಸಾಚಾರ ಕೂಡ ಜಾಸ್ತಿಯಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೋಪ್ ಫ್ರಾನ್ಸಿಸ್​, ನಾನು ಮಯನ್ಮಾರ್​​ನ ರಸ್ತೆಗಳಲ್ಲಿ ಮಂಡಿಯೂರಿ ಹಿಂಸಾಚಾರ ನಿಲ್ಲಿಸುವಂತೆ ಬೇಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

ಫೆಬ್ರವರಿ 1ರ ಮಿಲಿಟರಿ ಕ್ಷಿಪ್ರಕ್ರಾಂತಿಯ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪೋಪ್ ಪ್ರಾನ್ಸಿಸ್​, ಮಯನ್ಮಾರ್​​ನ ನಾಟಕೀಯ ಪರಿಸ್ಥಿತಿಯನ್ನು ಕಂಡು ತುಂಬಾ ದುಃಖವಾಗಿದೆ. ಅಲ್ಲಿ ತಮ್ಮ ದೇಶಕ್ಕಾಗಿ ತುಂಬಾ ಜನ, ಅದ್ರಲ್ಲೂ ಹೆಚ್ಚಾಗಿ ಯುವಕರು ತಮ್ಮ ಪ್ರಾಣವನ್ನು ಅರ್ಪಿಸುತ್ತಿದ್ಧಾರೆ.. ದಯವಿಟ್ಟು ಹಿಂಸಾಚಾರ ನಿಲ್ಲಿಸಿ. ರಕ್ತದಿಂದ ಯಾವ ವಿವಾದವನ್ನೂ ಬಗೆಹರಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply