ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಯುಸೂಫ್‌ ಪಠಾಣ್!

masthmagaa.com:

ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಪಕ್ಷ 42 ಲೋಕಸಭಾ ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನ ಅನೌನ್ಸ್ ಮಾಡಿದೆ. ಇದ್ರಲ್ಲಿ ಪ್ರಮುಖವಾಗಿ ಭಾರತದ ಮಾಜಿ ಕ್ರಿಕೆಟಿಗ ಯುಸೂಫ್‌ ಪಠಾಣ್‌ ಬಹರಂಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಬಹರಂಪುರದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ, ಹಾಲಿ ಸಂಸದ ಅಧೀರ್‌ ರಂಜನ್‌ ಚೌಧರಿಗೆ ಪ್ರಬಲ ಪೈಪೋಟಿ ನೀಡಲು ಯುಸೂಫ್‌ ಸಜ್ಜಾಗಿದ್ದಾರೆ. ಇನ್ನು‌ ಪ್ರಕರಣವೊಂದರಲ್ಲಿ ಸದ್ದು ಮಾಡಿ ಇತ್ತೀಚಿಗೆ ಸಂಸತ್‌ನಿಂದ ವಜಾ ಆಗಿದ್ದ ಮಾಜಿ ಸಂಸದೆ ಮಹುವಾ ಮೊಯಿತ್ರಾ, ಟಿಎಂಸಿ ಪರ ಕೃಷ್ಣನಗರದಿಂದ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಜೊತೆಗಿನ ಮೈತ್ರಿ ಹಾಗೆ I.N.D.I ಮೈತ್ರಿಕೂಟದಿಂದ ಟಿಎಂಸಿ ಈಗ ಅಧಿಕೃತವಾಗಿ ಹೊರಬಿದ್ದಂತಾಗಿದೆ. ಆದ್ರೆ AICC ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಮಾತ್ರ, ನಾಮಪತ್ರ ಹಿಂಪಡೆಯುವವರೆಗು ಮೈತ್ರಿಗೆ ಅವಕಾಶ ಇದೆ ಅಂತ ಹೇಳಿದ್ದಾರೆ. ಇನ್ನು ಬಂಗಾಳ ಸರ್ಕಾರ ರಾಮನವಮಿ ದಿನದಂದು ಪಬ್ಲಿಕ್‌ ಹಾಲಿಡೇ ಘೋಷಿಸಿದೆ.

ಇನ್ನು ಅತ್ತ ಹರ್ಯಾಣದಲ್ಲಿ ಬಿಜೆಪಿ ಸಂಸದ ಬ್ರಿಜೆಂಧರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಮುಂಬರೊ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಬ್ರಿಜೆಂಧರ್‌, ಹಿಸಾರ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply