ಜೋರ್ಡಾನ್ ಸರ್ಕಾರ ಅಸ್ಥಿರಕ್ಕೆ ಯತ್ನ: ರಾಜ​ 2ನೇ ಅಬ್ದುಲ್ಲಾ ಮೊದಲ ಮಾತು

masthmagaa.com:

ಜೋರ್ಡಾನ್​​ನ ರಾಜಪರಿವಾರದಲ್ಲಿ ಉಂಟಾಗಿರೋ ಬಿಕ್ಕಟ್ಟಿನ ಬಗ್ಗೆ ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಮಲ ಸಹೋದರ ಪ್ರಿನ್ಸ್ ಹಮ್ಝಾನ ನಡವಳಿಕೆಯಿಂದ, ದೇಶದ್ರೋಹದ ನಡೆಯಿಂದ ನನಗಾದ ಶಾಕ್​, ನೋವು ಮತ್ತು ಸಿಟ್ಟನ್ನ ಹುದುಗಿಟ್ಟುಕೊಂಡಿದ್ದೇನೆ ಅಂತ ಹೇಳಿದ್ದಾರೆ. ಜೊತೆಗೆ ಪ್ರಿನ್ಸ್ ಹಮ್ಝಾ ಸದ್ಯ ತನ್ನ ಕುಟುಂಬದ ಜೊತೆ ಅರಮನೆಯಲ್ಲಿ ನನ್ನ ರಕ್ಷಣೆಯಲ್ಲಿದ್ದಾನೆ. ಆತ ಈಗ ರಾಜಪರಿವಾರಕ್ಕೆ ನಿಷ್ಠನಾಗಿದ್ದು. ತನ್ನ ತಂದೆ-ತಾಯಿ ಮತ್ತು ಅಜ್ಜ-ಅಜ್ಜಿಯ ದಾರಿಯಲ್ಲಿ ನಡೆಯಲು ನಿರ್ಧರಿಸಿದ್ದಾನೆ. ಆದ್ರೆ ಜೋರ್ಡಾನ್ ಸರ್ಕಾರವನ್ನ ಅಸ್ಥಿರಗೊಳಿಸಲು ನಡೆದ ಯತ್ನದ ಬಗ್ಗೆ ತನಿಖೆ ನಡೆಸಲಾಗುತ್ತೆ ಅಂತ ಎರಡನೇ ಅಬ್ದುಲ್ಲಾ ಹೇಳಿದ್ದಾರೆ. ಅಂದ್ಹಾಗೆ ಎರಡನೇ ಅಬ್ದುಲ್ಲಾರ ಮಲ ಸಹೋದರ ಪ್ರಿನ್ಸ್ ಹಮ್ಝಾ ಒಂದಷ್ಟು ಜನರ ಜೊತೆ ಸೇರಿ ಸರ್ಕಾರವನ್ನ ಅಸ್ಥಿರಗೊಳಿಸಲು ಪ್ರಯತ್ನಿಸಿದ್ದು ಇತ್ತೀಚೆಗೆ ಬಹಿರಂಗವಾಗಿತ್ತು.

-masthmagaa.com

Contact Us for Advertisement

Leave a Reply