ಫೇಸ್ಬುಕ್ ನೇಮ್ ಚೇಂಜಾಗುತ್ತೆ! ಏನ್ ಇಟ್ರೆ ಚೆನ್ನಾಗಿರುತ್ತೆ?

masthmagaa.com:

ಫೇಸ್ಬುಕ್ ನೇಮ್ ಚೇಂಜಾಗುತ್ತೆ ಅನ್ನೋ ವರದಿಗಳ ನಡುವೆಯೇ ಹೊಸ ಹೆಸರೇನು ಅನ್ನೋ ಬಗ್ಗೆ ಡಿಜಿಟಲ್ ಜಗತ್ತು ಫುಲ್ ತಲೆ ಕೆಡಿಸಿಕೊಂಡಿದೆ. ಕೆಲವರು ಸಿಂಪಲ್ಲಾಗಿ FB ಅಂತ ಇಟ್ರೆ ಚೆನ್ನಾಗಿರುತ್ತೆ ಅಂದ್ರೆ, ಇನ್ನೂ ಕೆಲವರು ಹೊರೈಜಾನ್ ಸೂಪರ್ ಅಂದಿದ್ದಾರೆ. ಮೀಟಾ ಅನ್ನೋ ಹೆಸರನ್ನ ಕೂಡ ಕೆಲವರು ಸಜೆಸ್ಟ್ ಮಾಡ್ತಿದ್ದಾರೆ. ಈಗಾಗಲೇ ಮೀಟಾ ಡಾಟ್ ಕಾಮ್ ಅನ್ನೋ ಡೊಮೇನ್ ನೇಮ್ ರಿಜಿಸ್ಟರ್ ಆಗಿದೆ. ಅದನ್ನ ಬ್ರೋಸ್ ಮಾಡಿದಾಗ ಸೀದಾ ಮೀಟಾ ಟಾಟ್ ಓಆರ್ಜಿಗೆ ರಿಡೈರೆಕ್ಟ್ ಆಗ್ತಿದೆ. ಈ ಮೀಟಾ ಡಾಟ್ ಓಆರ್ಜಿ FB CEO ಮಾರ್ಕ್ ಝಕರ್ಬರ್ಗ್ ಪಾಲುದಾರರಾಗಿರೋ Chan Zukerberg Initiativeನ ಕಂಟ್ರೋಲ್‌ನಲ್ಲಿದೆ. ಹೀಗಾಗಿ ಮೀಟಾನೇ ಫೈನ್ ಆಗ್ಬೋದು ಅಂತ ತುಂಬ ಜನ ಗೆಸ್ ವರ್ಕ್ ಮಾಡ್ತಿದ್ದಾರೆ. ಫೇಸ್ಬುಕ್ ಅಕ್ಟೋಬರ್ 28ರ ಕಾನ್ಫರೆನ್ಸ್‌ನಲ್ಲಿ ನೇಮ್ ಚೇಂಜ್ ಅನೌನ್ಸ್ ಮಾಡುತ್ತೆ ಅಂತ ವರದಿಯಾಗಿದೆ. ಸೋ ನಿಮ್ಮ ಪ್ರಕಾರ ಫೇಸ್ಬುಕ್ ಹೊಸ ಹೆಸರು ಏನಿದ್ರೆ ಚಂದ ಅಂತ ಕಾಮೆಂಟ್ ಮಾಡಿ ತಿಳಿಸಿ.

-masthmagaa.com

Contact Us for Advertisement

Leave a Reply