ಸೂರ್ಯನ ಬಗ್ಗೆ ಯಾರೂ ಹೇಳದ ರಹಸ್ಯಗಳು..! ಮಿಸ್ ಮಾಡ್ದೆ ಓದಿ…

ಹಾಯ್ ಫ್ರೆಂಡ್ಸ್ ಭೂಮಿ ಮೇಲಿನ ಪ್ರತಿಯೊಂದು ಜೀವದ ಅಸ್ತಿತ್ವಕ್ಕೆ ಸೂರ್ಯನೇ ಆಧಾರ. ಇಂಥ ಸೂರ್ಯ ಇನ್ನು ಎಷ್ಟು ವರ್ಷ ಬದುಕುತ್ತಾನೆ..? ಸೂರ್ಯನ ಒಳಗೆ ಪ್ರತಿದಿನವೂ ಮಹಾ ಸ್ಫೋಟಗಳು ನಡೆಯುತ್ತಿರುತ್ತವೆ ಅಂದ್ರೆ ನೀವು ನಂಬ್ತೀರಾ..? ಸೂರ್ಯನ ಮೇಲೆ ಕಾಲ್ ಇಡೋ ಕೆ ಸಾಧ್ಯವಾಗಿದ್ದೇ ಆದರೆ ನಿಮ್ಮ ತೂಕ ಎಷ್ಟಿರುತ್ತೆ ಅಂತ ಗೊತ್ತಾ..? ಸೂರ್ಯನ ಕುರಿತು ಇಂತಹ ಇಂಟರೆಸ್ಟಿಂಗ್ ಮಾಹಿತಿಯನ್ನ ಹೇಳ್ತಾ ಹೋಗ್ತೀವಿ.

ಸೂರ್ಯನಿಗೆ ವಯಸ್ಸಾಗುತ್ತಿದೆ!
ಹೌದು ಫ್ರೆಂಡ್ಸ್ ನಾವು ದಿನನಿತ್ಯ ನೋಡುವ ಸೂರ್ಯ 4.6 ಶತಕೋಟಿ ವರ್ಷಗಳಿಂದ ಇದ್ದಾನೆ. ಇಂಥ ಸೂರ್ಯನಿಗೆ 7 ಶತಕೋಟಿ ವರ್ಷ ವಯಸ್ಸಾದಾಗ ಅದು ನಿಧಾನವಾಗಿ ತಣ್ಣಗಾಗಲು ಪ್ರಾರಂಭವಾಗುತ್ತೆ.

ಸೂರ್ಯನ ಒಳಗೆ ಭರ್ಜರಿ ಕಾರುಬಾರು
ಫ್ರೆಂಡ್ಸ್ ಭೂಮಿಯಿಂದ ಸೂರ್ಯನ ಕಡೆ ನೋಡಿದಾಗ ಅದು ಉರಿಯುತ್ತಿರುವ ಬೆಂಕಿಯ ಚೆಂಡಿನಂತೆ ಕಾಣುತ್ತೆ. ವಾಸ್ತವದಲ್ಲಿ ಸೂರ್ಯನ ಒಳಗಡೆ ಸಾಕಷ್ಟು ಚಟುವಟಿಕೆ ನಡಿತಾ ಇರುತ್ತೆ. ಎಷ್ಟರಮಟ್ಟಿಗೆ ಅಂದರೆ ಪ್ರತಿ ಸೆಕೆಂಡಿಗೆ ಐದು ಮಿಲಿಯನ್ ಟನ್ ಶಕ್ತಿ ಹಾಗೂ 695 ಮಿಲಿಯನ್ ಟನ್ ಹೀಲಿಯಂ 700 ಮಿಲಿಯನ್ ಟನ್ ಹೈಡ್ರೋಜನ್ ನಿಂದ ಬಿಡುಗಡೆಯಾಗುತ್ತಿರುತ್ತೆ. ಸೂರ್ಯ ಯಾಕೆ ತುಂಬಾ ಬಿಸಿಯಾಗಿ ಇರುತ್ತಾನೆ ಅನ್ನೋದು ಈಗ ನಿಮಗೆ ಅರ್ಥವಾಗಿರಬಹುದು.

ಸೂರ್ಯನಿಗೆ ಘನ ಮೇಲ್ಮೈ ಇಲ್ಲ
ಹೌದು ಫ್ರೆಂಡ್ಸ್ ಸೂರ್ಯನಿಗೆ ಯಾವುದೇ ಘನ ಮೇಲ್ಮೈ ಅನ್ನೋದು ಇಲ್ಲ. ಇದು ಕೇವಲ ಅನಿಲಗಳ ನ್ನ ಸುಡುವ ಚೆಂಡು.

ಭೂಮಿಯಂತೆ ಸುತ್ತುತ್ತಾನೆ ನೇಸರ
ಹೌದು ಫ್ರೆಂಡ್ಸ್ ಭೂಮಿಯಂತೆ ಸೂರ್ಯ ಕೂಡ ತನ್ನ ಕಕ್ಷೆಯಲ್ಲಿ ಸುತ್ತುತ್ತಾನೆ. ಕುತೂಹಲಕಾರಿ ಸಂಗತಿಯೆಂದರೆ ಸೂರ್ಯನ ಸಮಭಾಜಕವು ಸೂರ್ಯನ ಧ್ರುವಕಿಂತ ವೇಗವಾಗಿ ಚಲಿಸುತ್ತೆ. ಸೂರ್ಯನ ಸಮಭಾಜಕದಲ್ಲಿ ಒಂದು ರೌಂಡ್ ಹೊಡೆಯಲು 27 ದಿನಗಳನ್ನ ತೆಗೆದುಕೊಳ್ಳುತ್ತೆ. ಅದೇ ರೀತಿ ಅದರ ಧ್ರುವದಲ್ಲಿ 31 ದಿನಗಳನ್ನ ತೆಗೆದುಕೊಳ್ಳುತ್ತೆ. ಸೂರ್ಯನು ಅನಿಲಗಳಿಂದ ಕೂಡಿರುವುದರಿಂದ ಇದು ಸಾಧ್ಯ. ಒಂದು ವೇಳೆ ಸೂರ್ಯನ ಹೊರಪದರವು ಭೂಮಿಯಂತೆ ಗಟ್ಟಿಯಾಗಿದ್ದರೆ ಇದು ಅಸಾಧ್ಯವಾಗಿತ್ತು.

ನಾವು ಸೂರ್ಯನೊಳಗೆ ವಾಸಿಸುತ್ತಿದ್ದೇವೆ..!
ಫ್ರೆಂಡ್ಸ್ ನಾವು ಆಕಾಶದಲ್ಲಿ ನೋಡುವ ಸೂರ್ಯನು ಕೇವಲ ಕೆಂಪು-ಕಿತ್ತಳೆ ಬಣ್ಣದ ಬಾಲ್ ಗೆ ಮಾತ್ರ ಸೀಮಿತವಾಗಿಲ್ಲ. ಸೂರ್ಯನ ಹೊರ ವಾತಾವರಣವು 10 ಶತಕೋಟಿ ಮೈಲುಗಳಷ್ಟು ವಿಸ್ತರಿಸಿದೆ. ಆದ್ದರಿಂದ ನಮ್ಮ ಭೂಮಿಯು ಸೂರ್ಯನ ಹೊರಗಿನ ವಾತಾವರಣದಲ್ಲಿದೆ. ಅಲ್ಲಿಗೆ ನಾವು ಸೂರ್ಯನ ಒಳಗೆ ವಾಸಿಸುತ್ತಿದ್ದೇವೆ ಅಂತರ್ಥ.

ಭೂಮಿಗಿಂತ ತುಂಬಾ ಹೆಚ್ಚು ಗುರುತ್ವಾಕರ್ಷಣೆ
ಹೀಗಾಗಿ ಸೂರ್ಯನ ಮೇಲೆ ಅಧಿಕ ತೂಕ..!
ಹೌದು ಫ್ರೆಂಡ್ಸ್ ಭೂಮಿಯೊಂದಿಗೆ ಹೋಲಿಸಿದರೆ ಸೂರ್ಯನ ಗುರುತ್ವಾಕರ್ಷಣೆ ಬಲವು ಬರೋಬ್ಬರಿ 28 ಪಟ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಭೂಮಿ ಮೇಲೆ 50 ಕೆಜಿ ತೂಕ ತೂಗುವ ವ್ಯಕ್ತಿಯು ಸೂರ್ಯನ ಮೇಲೆ ಬರೋಬ್ಬರಿ 1353 ಕೆಜಿ ತೂಕವಿರುತ್ತಾನೆ. ಭೂಮಿಗೆ ಹೋಲಿಸಿದರೆ ಸೂರ್ಯನ ಗುರುತ್ವಾಕರ್ಷಣೆ ಜಾಸ್ತಿ ಇರೋದೇ ಇದಕ್ಕೆ ಕಾರಣ.

ಸೂರ್ಯನ ಒಳಗೆ ವಿಚಿತ್ರ ಸೌಂಡ್
ಸೂರ್ಯನ ಒಳಗಿರುವ ಅನಿಲಗಳು ಚಲಿಸುತ್ತಿರುತ್ತವೆ. ಇದನ್ನ ಸಂವಹನ ಚಲನೆ ಅಂತ ಕರೀತಾರೆ. ಈ ಚಲನೆಯು ಸಾಕಷ್ಟು ಶಬ್ದವನ್ನ ಸೃಷ್ಟಿಸುತ್ತೆ. ಅದರ ಧ್ವನಿ ತರಂಗಗಳು ಸೂರ್ಯನ ಒಳಗಡೆ ನಿರಂತರವಾಗಿ ಪುಟಿಯುತ್ತಿರುತ್ತೆ. ಈ ಆವರ್ತನಗಳು ತೀರಾ ಕಡಿಮೆ ಇರುವುದರಿಂದ ಆ ಸೌಂಡನ್ನ ನಾವು ಕೇಳಲು ಸಾಧ್ಯವಿಲ್ಲ. ವಿಜ್ಞಾನಿಗಳ ಪ್ರಕಾರ, ಇದು ಸ್ವಲ್ಪ ಮಟ್ಟಿಗೆ ಸಣ್ಣ ರಿಂಗಿಂಗ್ ಬೆಲ್ ನಂತೆ ಸೌಂಡ್ ಮಾಡುತ್ತೆ.

ಸೂರ್ಯ ಕಣ್ಮರೆಯಾದ್ರೆ ನಮ್ಗೆ ಗೊತ್ತಾಗಲ್ಲ
ಹೌದು ಫ್ರೆಂಡ್ಸ್ ಒಂದು ವೇಳೆ ಸೂರ್ಯ ದಿಡೀರ್ ಅಂತ ಕಣ್ಮರೆಯಾದರೆ ಹೇಗಿರುತ್ತೆ. ಹೀಗೇನಾದರೂ ಆದರೆ ನಮಗೆ ಎಂಟು ನಿಮಿಷಗಳವರೆಗೆ ಅದರ ಬಗ್ಗೆ ಗೊತ್ತಾಗುವುದೇ ಇಲ್ಲ. ಯಾಕಂದ್ರೆ ಸೂರ್ಯನ ಬೆಳಕು ಭೂಮಿಗೆ ಬರಬೇಕು ಅಂದ್ರೆ ಎಂಟು ನಿಮಿಷಗಳು ಬೇಕು.

ಸೂರ್ಯನ ಮೇಲೆ ಸ್ಫೋಟ
ಫ್ರೆಂಡ್ಸ್ ಸೂರ್ಯನ ಕಾಂತಕ್ಷೇತ್ರಗಳು ಒಟ್ಟಿಗೆ ಸೇರಿದಾಗ ಸೂರ್ಯನ ವಾತಾವರಣದಲ್ಲಿ ಸ್ಫೋಟಗಳು ಸಂಭವಿಸುತ್ತವೆ. ಇವುಗಳನ್ನು ಸೋಲಾರ್ ಫ್ಲೇರ್ ಅಥವಾ ಸೌರ ಜ್ವಾಲೆ ಅಂತ ಕರೀತಾರೆ. ಈ ಜ್ವಾಲೆಗಳು ಸೂರ್ಯನಿಂದ ಸುಮಾರು 1 ಲಕ್ಷ ಮೈಲಿಗಳಷ್ಟು ದೂರ ತಲುಪಬಹುದು. ಇವು ಎಷ್ಟು ಪವರ್ಫುಲ್ ಅಂದ್ರೆ, ಜ್ವಾಲೆಗಳ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿಯು 110 ಮೆಗಾಟನ್ ನ ಲಕ್ಷಾಂತರ ಹೈಡ್ರೋಜನ್ ಬಾಂಬ್ ಗಳು ಬ್ಲಾಸ್ಟ್ ಆದಾಗ ಬಿಡುಗಡೆಯಾಗುವ ಶಕ್ತಿಗೆ ಸಮವಾಗಿರುತ್ತೆ. ಪುಣ್ಯಕ್ಕೆ ನಮ್ಮ ಭೂಮಿ ಮೇಲೆ ಇಂತಹ ಯಾವುದೇ ಸೌರ ಜ್ವಾಲೆ ಇಲ್ಲ.

11 ವರ್ಷಕ್ಕೊಮ್ಮೆ ಧ್ರುವಗಳ ಬದಲಾವಣೆ
ಫ್ರೆಂಡ್ಸ್ ಪ್ರತಿ 11 ವರ್ಷಗಳಿಗೊಮ್ಮೆ ಸೂರ್ಯನ ಉತ್ತರ ದ್ರುವವು ದಕ್ಷಿಣ ದ್ರುವವಾಗಿ ಹಾಗೂ ದಕ್ಷಿಣ ದ್ರುವವು ಉತ್ತರ ದ್ರುವವಾಗಿ ಬದಲಾಗುತ್ತೆ. ಸೂರ್ಯನ ಮೇಲ್ಮೈನಲ್ಲಿ ಆಗುವ ಸ್ಫೋಟಗಳಿಂದ ಇದು ನಡೆಯುತ್ತೆ. ಹೀಗಾಗಿ ಕೆಲವೊಮ್ಮೆ ವಿದ್ಯುದ್ದೀಕರಿಸಿದ ಕಣಗಳು ಭೂಮಿಯನ್ನ ತಲುಪಬಹುದು. ಈ ಸ್ಫೋಟಗಳು ಪವರ್ ಗ್ರಿಡ್, ಜಿಪಿಎಸ್ ಘಟಕ ಹಾಗೂ ವಿಮಾನ ಸಂವಹನದ ಮೇಲೆ ಪರಿಣಾಮ ಬೀರುತ್ತೆ.

ಸೂರ್ಯನ ಮೇಲೂ ಕಪ್ಪು ಕಲೆಗಳು
ಹೌದು ಫ್ರೆಂಡ್ಸ್ ಕಡಿಮೆ ತಾಪಮಾನ ಹಾಗೂ ಆ ಪ್ರದೇಶದಲ್ಲಿನ ಕಾಂತೀಯ ಬಲದಿಂದಾಗಿ ಸೂರ್ಯನ ಮೇಲ್ಮೈ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಸನ್ ಸ್ಪಾಟ್ ಅಂತ ಕರೀತಾರೆ.

ಸನ್ ಸ್ಪಾಟ್ ಮತ್ತು ಶೇರು ಮಾರುಕಟ್ಟೆ
ಹೌದು ಫ್ರೆಂಡ್ಸ್ ಇದು ವಿಚಿತ್ರ ಅನಿಸಿದ್ರೂ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಸನ್ ಸ್ಪಾಟ್ ಹಾಗೂ ಶೇರು ಮಾರುಕಟ್ಟೆ ಪರಸ್ಪರ ಸಂಬಂಧ ಹೊಂದಿವೆ. ಅವರ ಪ್ರಕಾರ ಸನ್ ಸ್ಪಾಟ್ ಹೆಚ್ಚಾದಂತೆ ಜನ ಹೆಚ್ಚು ಶೇರುಗಳನ್ನ ಕೊಳ್ಳಲು ಶುರುಮಾಡುತ್ತಾರೆ. ಸನ್ ಸ್ಪಾಟ್ ಕಮ್ಮಿಯಾದಂತೆ ಮಾರುಕಟ್ಟೆ ಕೂಡ ಕುಸಿಯುತ್ತೆ.

ಸೂರ್ಯನ ಮೇಲೂ ಬೀಸುತ್ತೆ ಗಾಳಿ
ಹೌದು ಫ್ರೆಂಡ್ಸ್ ಸೂರ್ಯನ ಮೇಲೂ ಗಾಳಿ ಬಿಸುತ್ತೆ. ಆದ್ರದು ಭೂಮಿ ಮೇಲಿನ ಗಾಳಿಯಂತಲ್ಲ. ಸೂರ್ಯನ ಮೇಲೆ ಬೀಸುವ ಗಾಳಿಯು ಎಲೆಕ್ಟ್ರಾನ್, ಪ್ರೋಟಾನ್ ಹಾಗೂ ಕಡಿಮೆ ಸಾಂದ್ರತೆಯ ಕಣಗಳನ್ನು ಹೊಂದಿರುತ್ತದೆ. ಗಂಟೆಗೆ 450 ಕಿಲೊಮೀಟರ್ ವೇಗದಲ್ಲಿರುವ ಈ ಮಾರುತಗಳನ್ನ ಸೋಲಾರ್ ವಿಂಡ್ ಅಥವಾ ಸೌರ ಮಾರುತ ಅಂತ ಕರೀತಾರೆ. ಭೂಮಿಯು ವಾತಾವರಣದಿಂದ ರಕ್ಷಿಸಲ್ಪಟ್ಟಿವುದರಿಂದ ಈ ಗಾಳಿಯ ಕಣಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ.

ಸೂರ್ಯನ ಜೀವಿತಾವಧಿ
ಫ್ರೆಂಡ್ಸ್ ಸುಮಾರು 4.5 ಶತಕೋಟಿ ವರ್ಷಗಳಿಂದ ಉರಿಯುತ್ತಿರುವ ಸೂರ್ಯನು ತನ್ನಲಿರುವ ಅರ್ಧದಷ್ಟು ಹೈಡ್ರೋಜನ್ ನನ್ನ ಸುಟ್ಟು ಹಾಕಿದ್ದಾನೆ. ಹೀಗಾಗಿ ಇನ್ನು ಕೇವಲ ಐದು ಶತಕೋಟಿ ವರ್ಷಗಳಷ್ಟು ಸೂರ್ಯ ಸುಡುತ್ತಾನೆ. ಬಳಿಕ ಕೆಲ ವರ್ಷ ಊದಿಕೊಳ್ಳುತ್ತಾನೆ. ನಂತರ ಸೂರ್ಯ ಸಣ್ಣ ಬಿಳಿ ಕುಬ್ಜನಾಗಿ ಅಥವಾ ಶ್ವೇತಕುಬ್ಜನಾಗಿ ಸಾಯುತ್ತಾನೆ.

ಫ್ರೆಂಡ್ಸ್ ಇದಿಷ್ಟು ಸೂರ್ಯನ ಬಗ್ಗೆ ನಿಮಗೆ ಗೊತ್ತಿಲ್ಲದ 15 ಸಂಗತಿಗಳನ್ನು ತಿಳಿಸಿಕೊಡುವ ಪ್ರಯತ್ನ.

Contact Us for Advertisement

Leave a Reply