ಖ್ಯಾತ ಖಳನಟ ಕಝಾನ್​ ಖಾನ್ ನಿಧನ !

masthmaga.com:

ಖ್ಯಾತ ಖಳನಟ ಅಂತಾನೇ ಗುರುತಿಸಿಕೊಂಡಿರುವ ಕಝಾನ್​ ಖಾನ್ ನಿನ್ನೆ ( ಜೂನ್‌ 12)ರಂದು ನಿಧರಾಗಿದ್ದಾರೆ. ಕಝಾನ್​ ಖಾನ್​ ಅವರ ನಿಧನದ ಸುದ್ದಿಯನ್ನು ನಿರ್ಮಾಪಕ ಎನ್​ಬಿ ಬದುಶ ಅವರು ಖಚಿತಪಡಿಸಿದ್ದಾರೆ. ಈ ಮೂಲಕ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡುವ ಮೂಲಕ ಕಝಾನ್​ ಖಾನ್​ ಅವರು ಫೇಮಸ್​ ಆಗಿದ್ದರು. ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸಿದ್ದರು. ಕನ್ನಡದ ‘ಹಬ್ಬ’, ‘ನಾಗದೇವತೆ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ವಿಲನ್​ ಪಾತ್ರಗಳಲ್ಲಿ ಅವರನ್ನು ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದರು. ಅನೇಕ ಸ್ಟಾರ್​ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದರು.

-masthmagaa.com

Contact Us for Advertisement

Leave a Reply