ಯುಕ್ರೇನ್​​ ನಗರಗಳಲ್ಲಿ ಮೊಳಗಿದ ಏರ್ ರೈಡ್ ಸೈರನ್!

masthmagaa.com:

ಯುಕ್ರೇನ್​ನಲ್ಲಿ ರಷ್ಯಾ ಯುದ್ಧವನ್ನು ಮುಂದುವರಿಸಿದ್ದು, 17ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ಬೆಳಗ್ಗೆ ಯುಕ್ರೇನ್​ನ ನಗರಗಳಲ್ಲಿ ಏರ್​ ರೈಡ್​​ನ ಸೈರನ್ ಕೇಳಿದೆ. ಜನರು ಕೂಡಲೇ ತಮ್ಮ ತಮ್ಮ ಮನೆಗಳಿಗೆ ಹೋಗಬೇಕು, ಆಶ್ರಯ ತಾಣಗಳಿಗೆ ಹೋಗಬೇಕು ಅಂತ ಸೂಚಿಸಲಾಗಿದೆ. ರಾಜಧಾನಿ ಕಿಯೆವ್​, ಒಡೆಸ್ಸಾದ ಲೀವ್, ಖಾರ್ಕೀವ್, ಚೆರ್ಖಾಸಿ ಮತ್ತು ಸುಮಿ ನಗರದಲ್ಲಿ ಈ ರೀತಿಯ ಸೈರನ್ ಕೇಳಿದೆ ಅಂತ ವರದಿಯಾಗಿದೆ. ಕಿಯೆವ್ ವಶಕ್ಕೆ ಪಡೆಯಲು ರಷ್ಯಾದ ಸೈನಿಕರು ಒಟ್ಟುಗೂಡ್ತಿದ್ದಾರೆ ಅಂತ ಕೂಡ ಮೂಲಗಳು ತಿಳಿಸಿವೆ. ಅಂದಹಾಗೆ ಯುಕ್ರೇನ್ ಹೇಳೋ ಪ್ರಕಾರ ಈವರೆಗೆ ಸಂಘರ್ಷದಲ್ಲಿ 12 ಸಾವಿರ ರಷ್ಯನ್ ಸೈನಿಕರು ಪ್ರಾಣ ಕಳ್ಕೊಂಡಿದ್ದಾರೆ. ಇನ್ನು ಮಾರಿಯೋಪೋಲ್ ನಗರವನ್ನು ರಷ್ಯನ್ ಸೇನೆ ಸುತ್ತುವರಿದಿದ್ದು, ದಾಳಿ ಮುಂದುವರಿಸಿದೆ. ಕಳೆದ 11 ದಿನಗಳಿಂದ ನಗರದಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆ ಆಗ್ತಿಲ್ಲ ಅಂತ ಮೇಯರ್ ಮಾಹಿತಿ ನೀಡಿದ್ದಾರೆ. ಇನ್ನು ಸಂಘರ್ಷದಲ್ಲಿ ಈವರೆಗೆ ಯುಕ್ರೇನ್​ನಲ್ಲಿ 41 ಮಕ್ಕಳು ಸೇರಿದಂತೆ 564 ನಾಗರಿಕರು ಪ್ರಾಣ ಕಳ್ಕೊಂಡಿದ್ದಾರೆ.. ಜೊತೆಗೆ 25 ಲಕ್ಷ ಜನ ದೇಶ ಬಿಟ್ಟು ಹೋಗಿದ್ದಾರೆ ಅಂತ ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಮಾರಿಪೋಲ್​ನಲ್ಲಿ ಉದ್ದುದ್ದ ಟ್ರೆಂಚ್ ಹೊಡೆದು, ಅದ್ರಲ್ಲಿ ಮೃತದೇಹಗಳನ್ನು ಮುಚ್ಚುತ್ತಿರೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

-masthmagaa.com

Contact Us for Advertisement

Leave a Reply