ಲಕ್ಷದ್ವೀಪ: 700 ಜನರಿದ್ದ ಹಡಗಿನಲ್ಲಿ ಬೆಂಕಿ!

masthmagaa.com:

ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಆಂಡ್ರೋಥ್ ನಿಂದ ಕವರಟ್ಟಿಗೆ ಹೊರಟಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 624 ಪ್ರಯಾಣಿಕರು ಮತ್ತು 85 ಸಿಬ್ಬಂದಿ ಇದ್ರು. ಆಗ ಇಂಜಿನ್ ರೂಮ್ ನಲ್ಲಿ ಬೆಂಕಿ ಹತ್ತಿಕೊಂಡು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಭಾರತೀಯ ಕೋಸ್ಟ್ ಗಾರ್ಡ್ ಕೂಡಲೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದೆ. ಎಲ್ಲರನ್ನೂ ಕಾಪಾಡಿದೆ. ಲಕ್ಷದ್ವೀಪ 36 ದ್ವೀಪಗಳ ಸಮೂಹ. ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಜಲಮಾರ್ಗವೇ ಪ್ರಮುಖ ಆಧಾರ.

-masthmagaa.com

Contact Us for Advertisement

Leave a Reply