ಕೊರೋನಾಗೆ ಔಷಧಿ ಸಿದ್ಧ..? ಅಮೆರಿಕಾದಲ್ಲಿ ಪ್ರಯೋಗ..!

masthmagaa.com

ಅಮೆರಿಕ: ವಿಶ್ವದಾದ್ಯಂತ ಲಂಗು ಲಗಾಮಿಲ್ಲದೇ ವ್ಯಾಪಿಸಿಕೊಳ್ತಿರೋ ಕೊರೋನಾಗೆ ಎಲ್ಲೆಡೆ ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಲೇ ಇದೆ. ಇದರಲ್ಲಿ ದೊಡ್ಡಣ್ಣ ಅಮೆರಿಕಾ ಕೂಡ ಸೇರಿದ್ದು, ಸಿಯಾಟೆಲ್‌ನಲ್ಲಿರುವ ವಾಷಿಂಗ್ಟನ್ ಹೆಲ್ತ್ ರಿಸರ್ಚ್ ಸೆಂಟರ್‌ನಲ್ಲಿ ಔಷಧಿಯೊಂದನ್ನು ತಯಾರಿಸಿದೆ. ಮೊದಲ ಬಾರಿಗೆ ಮಾನವರ ಮೇಲೆ ಪ್ರಯೋಗಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗ್ತಿದೆ. ಸ್ವಯಂಪ್ರೇರಿತವಾಗಿ ಮುಂದೆ ಬಂದ 43 ವರ್ಷದ ವ್ಯಕ್ತಿಯ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಇದು ಸರಿಯಾಗಿ ಕೆಲಸ ಮಾಡಿದೆಯೋ ಇಲ್ಲವೋ ಅನ್ನೋದನ್ನು ತಿಳಿಯಲು ಕನಿಷ್ಠ ಪಕ್ಷ ಒಂದೂವರೆ ವರ್ಷ ಬೇಕಾಗುತ್ತದೆ ಎನ್ನಲಾಗ್ತಿದೆ. ಅಮೆರಿಕಾ ಕೂಡ ಡೆಡ್ಲಿ ವೈರಸ್‌ಗೆ ಬೆಚ್ಚಿಬಿದ್ದಿದ್ದು, ಈಗಾಗಲೇ 70 ಮಂದಿ ಸಾವನ್ನಪ್ಪಿದ್ದಾರೆ.

masthmagaa.com

Contact Us for Advertisement

Leave a Reply