ಏರ್ ಸ್ಟ್ರೈಕ್‍ನಲ್ಲಿ ಉಗ್ರರೇ ಸತ್ತಿಲ್ಲ ಎಂದ ಇಮ್ರಾನ್‍ಗೆ ಭಾರತದ ಗುದ್ದು

ಭಾರತಕ್ಕೆ ಪರೋಕ್ಷವಾಗಿ ಅಣ್ವಸ್ತ್ರ ಬೆದರಿಕೆಯೊಡ್ಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತದ ಪ್ರತಿನಿಧಿ ವಿದಿಶಾ ಮೈತ್ರಾ ತಕ್ಕ ತಿರುಗೇಟು ಕೊಟ್ಟಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿಶ್ವಸಂಸ್ಥೆಯ ವೇದಿಕೆಯನ್ನು ದುರ್ಬಳಕೆ ಮಾಡ್ತಿದ್ದಾರೆ. ದೇಶದಲ್ಲಿ ಉಗ್ರರ ಕಾರ್ಖಾನೆ ನಡೆಸ್ತಿರೋ ದೇಶದಿಂದ ನಮಗೇನೂ ಕಲಿಯೋ ಅವಶ್ಯಕತೆ ಇಲ್ಲ ಅಂದ್ರು. ಇನ್ನು ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ಉಗ್ರರು ಸತ್ತಿಲ್ಲ. ಮರಗಳು ನಾಶವಾಗಿದ್ದವು ಅಷ್ಟೆ ಎಂಬ ಇಮ್ರಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ದೇಶದಲ್ಲಿ ವಿಶ್ವಸಂಸ್ಥೆ ಘೋಷಿಸಿರುವ 130 ಮಂದಿ ಉಗ್ರರು ಇಲ್ವಾ ಅಂತ ಪ್ರಶ್ನಿಸಿದ್ರು. ಅಲ್ಲದೆ ಅಣ್ವಸ್ತ್ರ ದಾಳಿಯ ಬೆದರಿಯೊಡ್ಡಿ ಇಮ್ರಾನ್ ಖಾನ್ ಅಸ್ಥಿರತೆ ಸೃಷ್ಟಿಸೋ ಪ್ರಯತ್ನ ಮಾಡಿದ್ದಾರೆ. ಅವರು ಕ್ರಿಕೆಟರ್ ಆಗಿದ್ದು, ಅದೊಂದು ಜೆಂಟಲ್ ಮನ್ ಆಟವಾಗಿದೆ. ಆದ್ರೆ ಅವರ ಇಂದಿನ ಭಾಷಣದಲ್ಲಿ ಪರಿಪಕ್ವತೆಯ ಕೊರತೆ ಎದ್ದು ಕಾಣುತ್ತಿತ್ತು ಅಂತ ವಿದಿಶಾ ಮೈತ್ರಾ ಹೇಳಿದ್ದಾರೆ.

Contact Us for Advertisement

Leave a Reply