ಭಾರತ್ ಮಾತಾ ಕೀ ಜೈ ಅನ್ನಲ್ಲ ಯಾಕೆ..? ನೀವು ಪಾಕಿಸ್ತಾನದವರಾ..?

ಹರಿಯಾಣದ ಆದಂಪುರ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ಬಿಜೆಪಿ ನಾಯಕಿ, ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೋನಾಲಿ ಫೋಗಟ್ ಹರಿಯಾಣ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಭಜನ್ ಲಾಲ್ ಪುತ್ರ ಬಿಷ್ಣೋಯಿ ವಿರುದ್ಧ ಕಣಕ್ಕಳಿದಿದ್ದಾರೆ. ಇಂದು ಬಲ್ಸಾಮಂದ್ ಗ್ರಾಮದಲ್ಲಿ ಮಾತನಾಡಿದ ಸೋನಾಲಿ ಫೋಗಟ್, ಎರಡ್ಮೂರು ಭಾರಿ ಭಾರತ್ ಮಾತಾಕಿ ಜೈ ಎಂದು ಘೋಷವಾಕ್ಯ ಕೂಗಿದ್ದಾರೆ. ಆದ್ರೆ ಕೆಲವರು ಜೈ ಹೇಳಲಿಲ್ಲ. ಇದ್ರಿಂದ ಸಿಟ್ಟಿಗೆದ್ದ ಸೋನಾಲಿ ಫೋಗಟ್, ನೀವೆಲ್ಲಾ ಪಾಕಿಸ್ತಾನದಿಂದ ಬಂದವರಾ..? ನೀವು ಭಾರತೀಯರೇ ಆಗಿದ್ದಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿ ಎಂದು ಅವಾಜ್ ಬಿಟ್ಟಿದ್ದಾರೆ. ಅಲ್ಲದೆ ನಿಮಗೆಲ್ಲಾ ನಾಚಿಕೆಯಾಗಬೇಕು. ಯಾರಿಗೆ ಭಾರತ್ ಮಾತಾ ಕೀ ಜೈ ಎನ್ನಲು ಸಾಧ್ಯವಿಲ್ಲವೋ..? ಅವರಿಗೆ ಯಾವುದೇ ರೀತಿಯ ಬೆಲೆ ಇಲ್ಲ ಎಂದಿದ್ದಾರೆ.

Contact Us for Advertisement

Leave a Reply