ಐಎಸ್​ಐಗೆ ಹೊಸ ಮುಖ್ಯಸ್ಥ! ಯಾರು ಗೊತ್ತಾ..?

masthmagaa.com:

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ​ ಅಂದ್ರೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್​ ಮುಖ್ಯಸ್ಥರನ್ನು ಬದಲಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥ ಫೈಜ್ ಹಮೀದ್ ಜಾಗಕ್ಕೆ ಜನರಲ್ ನದೀಂ ಅಂಜುಮ್​ರನ್ನು ತಂದು ಕೂರಿಸಲಾಗಿದೆ. ಪಾಕ್​ನ ಪಂಜಾಬ್​ ರೆಜಿಮೆಂಟ್​​​ನವರಾದ ನದೀಂ ಈವರೆಗೆ ಕರಾಚಿಯಲ್ಲಿ ಕೋರ್ ಕಮಾಂಡರ್ ಆಗಿ ಕೆಲಸ ಮಾಡ್ತಿದ್ರು. ಈಗ ಸಡನ್ ಆಗಿ ಐಎಸ್​ಐ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಮುಖ್ಯಸ್ಥರಾಗಿದ್ದ ಫೈಜ್ ಹಮೀದ್​​ 2019ರಲ್ಲಿ ನೇಮಕಗೊಂಡಿದ್ರು. ಈಗ ಅವರನ್ನು ಪೇಶಾವರ್ ಕೋರ್ ಕಮಾಂಡರ್ ಆಗಿ ನಿಯೋಜಿಸಲಾಗಿದೆ. ಇವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಮೂರ್ನಾಲ್ಕು ದಿನ ಅಲ್ಲೇ ಹೋಗಿ ಬೀಡು ಬಿಟ್ಟಿದ್ರು. ಆದ್ರೆ ಈಗ ಅವರನ್ನು ಈ ಸ್ಥಾನದಿಂದ ತೆಗೆದು ಹಾಕಲಾಗಿದೆ. ಅಂದಹಾಗೆ ಐಎಸ್​​ಐ ಒಂದು ಗುಪ್ತಚರ ಸಂಸ್ಥೆಯಾದ್ರೂ ಕೂಡ ಪಾಕಿಸ್ತಾನದಲ್ಲಿ ಇದ್ರ ಪಾತ್ರ ತುಂಬಾ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಪ್ರಧಾನಮಂತ್ರಿಯೇ ಈ ಹುದ್ದೆಗೆ ಆಯ್ಕೆ ಮಾಡ್ತಾರೆ. ಆದ್ರೆ ಸೇನಾ ಮುಖ್ಯಸ್ಥರ ಸಲಹೆ ಮೇರೆಗೆ ಆಯ್ಕೆ ಮಾಡೋದು ಒಂದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ. ಭದ್ರತೆ ಮತ್ತು ವಿದೇಶಾಂಗ ನೀತಿಯಲ್ಲಿ ಐಎಸ್​ಐ ಪಾತ್ರವನ್ನು ನೋಡಬಹುದಾಗಿದೆ. ಇನ್ನು ಬೇರೆ ದೇಶಗಳಲ್ಲಿ ಭಯೋತ್ಪಾದನೆ ದಾಳಿಯ ಹಿಂದೆಯೂ ಐಎಸ್​ಐ ಕೈವಾಡ ಇರುತ್ತೆ ಅನ್ನೋ ಆರೋಪಗಳು ಕೂಡ ಇವೆ.

-masthmagaa.com

Contact Us for Advertisement

Leave a Reply