ಫ್ರಾನ್ಸ್‌ನಲ್ಲಿ ಮತ್ತೆ ಲಾಕ್‌ಡೌನ್‌!

masthmagaa.com:

ನಿನ್ನೆಯಷ್ಟೇ ಫ್ರಾನ್ಸ್​ನಲ್ಲಿ ಹೊಸ ರೂಪಾಂತರಿತ ಕೊರೋನಾ ಪತ್ತೆಯಾಗಿರೋ ಬಗ್ಗೆ ವರದಿಯಾಗಿತ್ತು. ಅದ್ರ ಬೆನ್ನಲ್ಲೇ ಈಗ ಫ್ರಾನ್ಸ್​ನಲ್ಲಿ ಕೊರೋನಾದ 3ನೇ ಅಲೆ ಶುರುವಾಗಿದೆ ಅಂತ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್​ ತಿಳಿಸಿದ್ದಾರೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸಬೇಕು. ನಾನು ಈ ವರ್ಷಾಂತ್ಯದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತಿದ್ದೆ.

ಆದ್ರೆ ಜನರಲ್ಲಿ ಲಸಿಕೆ ಬಗ್ಗೆ ಭರವಸೆ ಮೂಡಿಸುವ ಸಲುವಾಗಿ ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ತೀನಿ ಎಂದಿದ್ದಾರೆ. ಅಂದಹಾಗೆ ಕಳೆದೊಂದು ವಾರದಿಂದ ಪ್ರತಿದಿನವೂ ಸರಾಸರಿ 25 ಸಾವಿರದಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗ್ತಿವೆ. ಕಳೆದ ನವೆಂಬರ್ ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕೊರೋನಾ ಜಾಸ್ತಿಯಾಗ್ತಿದೆ. ಹೀಗಾಗಿ ಫ್ರಾನ್ಸ್​​​ನ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಹೀಗಾಗಿ ನೆಪೋಲಿಯನ್ ನಾಡಲ್ಲಿ ಮತ್ತೆ ಲಾಕ್​ಡೌನ್ ಹೇರುವ ಸಾಧ್ಯತೆ ದಟ್ಟವಾಗಿದೆ.

-masthmagaa.com

Contact Us for Advertisement

Leave a Reply