ಪುಟಿನ್‌ ಮನವೊಲಿಸಿದ ಮ್ಯಾಕ್ರನ್‌.. ಸಧ್ಯಕ್ಕೆ ಯುದ್ದ ಇಲ್ವಾ?

masthmagaa.com:

ಯುಕ್ರೇನ್‌ ಮತ್ತು ರಷ್ಯಾ ಬಿಕ್ಕಟ್ಟನ್ನ ಬಗೆಹರಿಸಲು ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಜೊತೆ ಸೋಮವಾರ ನಡೆಸಿದ ಮಾತುಕತೆ ಯಶಸ್ವಿಯಾದಂತೆ ಕಾಣ್ತಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸುದೀರ್ಘ 5 ಗಂಟೆ ನಡೆದ ಮಾತುಕತೆ ವೇಳೆ ಪುಟಿನ್​ ಕಾಂಪ್ರಮೈಸ್​ ಆಗಿದ್ದಾರೆ ಅಂತ ವರದಿಯಾಗಿದೆ. ಮಾತುಕತೆ ಬಳಿಕ ಮಾತನಾಡಿದ ವ್ಲಾದಿಮಿರ್‌ ಪುಟಿನ್‌​, ಮ್ಯಾಕ್ರನ್​ ಪ್ರಸ್ತಾಪಿಸಿದ ಕೆಲವೊಂದು ಸಲಹೆಗಳು ಚೆನ್ನಾಗಿವೆ, ಮುಂದಕ್ಕೆ ಹೆಜ್ಜೆ ಇಡಲು ಅವು ಬುನಾದಿಯಾಗಬಹುದು ಅಂತ ಹೇಳಿದ್ದಾರೆ. ಜೊತೆಗೆ ನ್ಯಾಟೋದೊಂದಿಗಿನ ಸಮಸ್ಯೆಗಳನ್ನ ಪರಿಹರಿಸುವಲ್ಲಿ ಫ್ರಾನ್ಸ್‌ ಮಾಡುತ್ತಿರುವ ಪ್ರಯತ್ನಗಳಿಗೆ ನಾನು ಧನ್ಯವಾದ ತಿಳಿಸಿದ್ರು. ಆದ್ರೆ ಮಾತುಕತೆಯಲ್ಲಿ ಮ್ಯಾಕ್ರನ್ ಏನೇನು ಪ್ರಸ್ತಾಪ ಮಾಡಿದ್ರು ಅಂತ ಹೇಳಿಲ್ಲ. ಮ್ಯಾಕ್ರನ್​ ಮಾತನಾಡಿ, ಎಂಗೇಜ್​ ಆಗಲು ರೆಡಿ ಇರೋದಾಗಿ ನಂಗೆ ಪುಟಿನ್​ ಭರವಸೆ ನೀಡಿದ್ದಾರೆ. ಎರಡೂ ಕಡೆಯವರು ಯಾವುದೇ ಹೊಸ ಸೇನಾ ಕಾರ್ಯಾಚರಣೆ ನಡೆಸಬಾರು, ಮಾತುಕತೆಗೆ ಹೊಸ ಸ್ಟ್ರಾಟಜಿಕ್​ ಮಾತುಕತೆಯನ್ನ ಆರಂಭಿಸೋದು ಮತ್ತು ಯುಕ್ರೇನ್​ನ ಪೂರ್ವ ಭಾಗದಲ್ಲಿರೋ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ನಡೆಸಿ ಶಾಂತಿ ಪ್ರಕ್ರಿಯೆಯನ್ನ ಮತ್ತೆ ಆರಂಭಿಸುವ ಪ್ರಯತ್ನಗಳ ಬಗ್ಗೆ ನಾನು ಪ್ರಸ್ತಾಪ ಮಾಡಿದ್ದೀನಿ ಅಂತ ಮ್ಯಾಕ್ರನ್ ಹೇಳಿದ್ರು. ಇನ್ನು ಇವತ್ತು ಇಮ್ಯಾನ್ಯುಯೆಲ್​ ಮ್ಯಾಕ್ರನ್‌ ಯುಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿಯನ್ನ ಯುಕ್ರೇನ್ ರಾಜಧಾನಿ ಕ್ವಿವ್​ನಲ್ಲಿ ಭೇಟಿಯಾಗಲಿದ್ದಾರೆ. ಇದಾದ ಬಳಿಕ ಮತ್ತೆ ಪುಟಿನ್‌ ಜೊತೆಗೆ ಫೋನ್‌ನಲ್ಲಿ ಮಾತನಾಡಲಿದ್ದಾರೆ. ರಷ್ಯಾ-ಯುಕ್ರೇನ್​ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾದ ನಂತ್ರ ಪುಟಿನ್‌ ಭೇಟಿ ಮಾಡಿದ ಮೊದಲ ಟಾಪ್‌ ವೆಸ್ಟರ್ನ್‌ ಲೀಡರ್‌ ಆಗಿದ್ದಾರೆ ಮ್ಯಾಕ್ರನ್‌. ಸದ್ಯದಲ್ಲಿಯೇ ಫ್ರಾನ್ಸ್‌ನಲ್ಲಿ ಚುನಾವಣೆ ಇರುವದರಿಂದ ಮ್ಯಾಕ್ರನ್‌ ತನ್ನನ್ನ ಯೂರೋಪಿನ ಪ್ರಮುಖ ನಾಯಕನಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಕೂಡ ಇದರ ಹಿಂದಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply