ಸಿಎಂ ಸ್ಥಾನದ ಬಗ್ಗೆ ಬಿಸಿ ಬಿಸಿ ಚರ್ಚೆ! ಅಧಿಕಾರ ಹಂಚಿಕೆ ಆಗಿತ್ತಾ?

masthmagaa.com:

ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದೇ ತಿಂಗಳಿಗೆ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿ ಮುಂದಿನ ಐದು ವರ್ಷ ಸಿದ್ದರಾಮಯ್ಯ ಒಬ್ಬರೇ ಸಿಎಂ ಆಗಿರುತ್ತಾರಾ? ಅಥವಾ ಅಧಿಕಾರ ಹಂಚಿಕೆ ಆಗಿತ್ತಾ? ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುತ್ತಾ? ಅನ್ನೊ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಇದು ಮಾಧ್ಯಮಗಳ ಸೃಷ್ಠಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರೋ ಬಿಜೆಪಿ, ‘ಮಾಧ್ಯಮ’ ಅಂದ್ರೆ ಯಾರು ಸ್ವಾಮೀ? ಹೆಚ್. ಸಿ. ಮಹಾದೇವಪ್ಪ ಅವರಾ? ಅಥವಾ ಸತೀಶ್ ಜಾರಕಿಹೊಳಿ ಅವರಾ? ಅಂತ ಪ್ರಶ್ನಿಸಿ ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ ಎಟಿಎಂ ಸರ್ಕಾರದ ಗುದ್ದಾಟ ಅಂತ ವ್ಯಂಗ್ಯವಾಡಿದೆ. ಅಲ್ದೇ ಕಾಂಗ್ರೆಸ್‌ ನಾಯಕರ ಹೇಳಿಕೆಗಳನ್ನ ಉಲ್ಲೇಖಿಸಿರೋ ಬಿಜೆಪಿ, ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಅಂತ ಹೇಳಿದ್ದಾರೆ. ಇದಕ್ಕೆ ಟಕ್ಕರ್ ಕೊಟ್ಟ ಡಿಕೆ ಸುರೇಶ್, ಎಂ. ಬಿ. ಪಾಟೀಲ್ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲಾರನ್ನೇ ಕೇಳಿ ಅಂತ ಹೇಳಿರೋದನ್ನ ಟ್ವೀಟ್‌ ಮಾಡಿದೆ. ಅಷ್ಠ ಅಲ್ದೇ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಅಂತ ಸಿ ಮಹಾದೇವಪ್ಪ ಅವರು ಹೇಳಿದ್ದಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಅಂತ ಸತೀಶ್ ಜಾರಕಿಹೊಳಿ ಹಾಗೂ ಕೆಎನ್ ರಾಜಣ್ಣ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಡಿಕೆ ಸುರೇಶ್‌, ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ಆಸಕ್ತಿ ಜಾಸ್ತಿ ಅಂತ ವ್ಯಂಗ್ಯವಾಡಿದ್ದನ್ನ ಬಿಜೆಪಿ ಟ್ವೀಟ್‌ ಮಾಡಿ ಕಾಂಗ್ರೆಸ್‌ನ ಕಾಲೆಳೆದಿದೆ. ಇತ್ತ ಸಿದ್ದರಾಮಯ್ಯ ಅವರ ಆಪ್ತರು ಒಬ್ಬರ ಬೆನ್ನಲ್ಲಿ ಒಬ್ಬರಂತೆ ನೀಡುತ್ತಿರುವ ಹೇಳಿಕೆಗಳು ಡಿಕೆಶಿ ಆಪ್ತರ ನಿದ್ದೆಗೆಡಿಸಿದೆ. ಇದರೆಲ್ಲರ ನಡುವೆ ಸಿದ್ದರಾಮಯ್ಯ ಗುಂಪು ಡಿ‌ಕೆರನ್ನ ಸನ್ಯಾಸಿ ಮಾಡಲು ಹೊರಟಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಕಾಲ ಸನ್ನಿಹಿತ ಆಗಲಿದೆ. ಸಿದ್ದರಾಮಯ್ಯ ಟೀಂ ಡಿಕೆರನ್ನ ಹಿಮಾಲಯಕ್ಕೆ ಕಳುಹಿಸಲಿದೆ ಅಂತ ಬೆಂಗಳೂರಿನಲ್ಲಿ ಕಾಂಗ್ರೆಸ್​ ವಿರುದ್ಧ ಆರ್​.ಅಶೋಕ್​ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply