ಮಸಾಜ್‌ ಪಾರ್ಲರ್‌ ಮೇಲೆ ಅಟ್ಯಾಕ್‌ 8 ಮಂದಿ ಸಾವು!

masthmagaa.com:

ಮಸಾಜ್ ಪಾರ್ಲರ್ ಒಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಎರ್ರಾಬಿರ್ರಿ ಗುಂಡಿನ ದಾಳಿ ನಡೆಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದ ಜಾರ್ಜಿಯಾದ ಅಟ್ಲಾಂಟಾದಲ್ಲಿ ಈ ಘಟನೆ ವರದಿಯಾಗಿದೆ. ಮೃತಪಟ್ಟವರ ಪೈಕಿ 6 ಮಂದಿ ಏಷ್ಯನ್ನರಾಗಿದ್ದಾರೆ. ಅವರಲ್ಲಿ ನಾಲ್ವರು ಸೌತ್ ಕೊರಿಯಾದ ಪ್ರಜೆಗಳು ಅಂತ ಕೂಡ ತಿಳಿದು ಬಂದಿದೆ.

ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಘಟನೆಗೆ ಕಾರಣ ಏನು ಅನ್ನೋದು ಇನ್ನೂ ಕೂಡ ಗೊತ್ತಾಗಿಲ್ಲ. ಆದ್ರೆ ಕೆಲ ತಿಂಗಳುಗಳಿಂದ ಏಷ್ಯಾ ಮೂಲದ ಅಮೆರಿಕನ್ನರ ವಿರುದ್ಧದ ಅಪರಾಧಗಳು ಹೆಚ್ಚಾಗುತ್ತಿವೆ.. ಕೊರೋನಾ ಹರಡೋಕೆ ಅವರೇ ಕಾರಣ ಅನ್ನೋದು ಈ ದ್ವೇಷ ಭಾವನೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply